ಮುಂಬಯಿ ಕಸವಿಲೇವಾರಿ ಸ್ಥಳದಲ್ಲಿ ಅಗ್ನಿ ಅನಾಹುತ: ಹೊಗೆಯಿಂದಾಗಿ ನಿವಾಸಿಗಳ ಪರದಾಟ
ಮುಂಬಯಿ ಪೂರ್ವ ಡೆಯೋನರ್ ಕಸವಿಲೇವಾರಿ ಸ್ಥಳದಲ್ಲಿ ಶನಿವಾರ ಸಂಜೆ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಇನ್ನೂ ಹರಸಾಹಸಪಡುತ್ತಿದೆ...

ಮುಂಬೈ: ಮುಂಬಯಿ ಪೂರ್ವ ಡೆಯೋನರ್ ಕಸವಿಲೇವಾರಿ ಸ್ಥಳದಲ್ಲಿ ಶನಿವಾರ ಸಂಜೆ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಇನ್ನೂ ಹರಸಾಹಸಪಡುತ್ತಿದೆ.
12ಕ್ಕೂ ಹೆಚ್ಚು ಅಗ್ನಿಶಾಮಕ ದಳ ವಾಹನ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿಸಿದೆ. ಇದರಿಂದಾಗಿ ಹುಟ್ಟಿಕೊಂಡ ಭಾರಿ ಪ್ರಮಾಣದ ಹೊಗೆ, ವಾಸನೆ ಸುತ್ತಲಿನ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಲಾರಂಭಿಸಿದೆ. ಭಾನುವಾರ ಮಧ್ಯಾಹ್ನ ಕೂಡ ಮತ್ತೆ ಬೆಂಕಿ ಹೊತ್ತಿಕೊಂಡಿದೆ. ಕಸದ ರಾಶಿಯಿಂದ ಹೊರಬರುತ್ತಿರುವ ಕೆಟ್ಟಹೊಗೆ ಇಲ್ಲಿನ ಜನರ ಮೇಲೆ ದುಷ್ಪರಿಣಾಮ ಬೀರಲಿದೆ,
ಬೆಂಕಿ ಹೊತ್ತಿಕೊಂಡಿರುವ ಸ್ಥಳದಲ್ಲೇ ಶಾಲಾ ಕಾಲೇಜುಗಳಿದ್ದು ವಿದ್ಯಾರ್ಥಿಗಳ ಮೇಲೆ ಹೊಗೆ ಕೆಟ್ಟ ಪರಿಣಾಮ ಬೀರಲಿದೆ ಎಂಬ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮುಂಬೈ ನಗರದಲ್ಲಿರುವ ಬೃಹತ್ ಕಸವಿಲೇವಾರಿ ಕೇಂದ್ರ ಇದಾಗಿದ್ದು, ಹೆಚ್ಚೂಕಡಿಮೆ 326 ಎಕರೆ ಜಾಗದಲ್ಲಿದೆ. ಸಾಕಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳು ಇರುವ ಕಾರಣ ಬೆಂಕಿ ವಿಸ್ತರಿಸುತ್ತಲೇ ಇದ್ದು, ನಂದಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


