ಮಗಳ ಮೇಲೆ ಅತ್ಯಾಚಾರ: ಕಾಮುಕ ತಂದೆ ಕೊನೆಗೂ ಪೊಲೀಸರ ಬಲೆಗೆ
ಹೆತ್ತ ಮಗಳ ಮೇಲೆಯೇ 4 ನಾಲ್ಕು ವರ್ಷಗಳಿಂದ ನಿರಂತರ ಅತ್ಯಾಚಾರ ಮಾಡಿ ಅಮಾಯಕನಂತೆ ವರ್ತಿಸುತ್ತಿದ್ದ ಕಾಮುಕ ತಂದೆಯನ್ನು ಕೊನೆಗೂ ಬಂಧಿಸುವಲ್ಲಿ ಉತ್ತರ ಪ್ರದೇಶ...

ಜಲೌನ್: ಹೆತ್ತ ಮಗಳ ಮೇಲೆಯೇ 4 ನಾಲ್ಕು ವರ್ಷಗಳಿಂದ ನಿರಂತರ ಅತ್ಯಾಚಾರ ಮಾಡಿ ಅಮಾಯಕನಂತೆ ವರ್ತಿಸುತ್ತಿದ್ದ ಕಾಮುಕ ತಂದೆಯನ್ನು ಕೊನೆಗೂ ಬಂಧಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಿಎಸ್ಸಿ ನರ್ಸಿಂಗ್ ಓದುತ್ತಿದ್ದ ಹೆಣ್ಣು ಮಗಳನ್ನು ಕಾಮದ ಕಣ್ಣಿನಿಂದ ನೋಡುತ್ತಿದ್ದ ತಂದೆಯೊಬ್ಬ 4 ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ಯುವತಿ ಈ ವಿಷಯವನ್ನು ತನ್ನ ತಾಯಿ ಬಳಿ ಹೇಳಿಕೊಂಡಿದ್ದರೂ. ಇದನ್ನು ಆಕೆ ನಂಬಿರಲಿಲ್ಲ. ಹೀಗಾಗಿ ತನ್ನ ಗೆಳತಿಯ ಸಹಾಯದಿಂದ ಅತ್ಯಾಚಾರವೆಸಗುವ ದೃಶ್ಯವನ್ನು ಚಿತ್ರೀಕರಣ ಮಾಡಿಕೊಂಡಿದ್ದಳು. ವಿಡಿಯೋವನ್ನು ತನ್ನ ತಾಯಿಗೆ ತೋರಿಸಿದ ಬಳಿಕ ತಂದೆಗೆ ಶಿಕ್ಷೆಯಾಗಬೇಕೆಂದು ಪೊಲೀಸರಿಗೆ ದೂರು ನೀಡಿದ್ದಳು. ಇದರಂತೆ ಪೊಲೀಸರು ಕಾಮುಕ ತಂದೆಯನ್ನು ಬಂಧನಕ್ಕೊಳಪಡಿಸಿದ್ದಾರೆ.ಇದೀಗ ಕಾಮುಕ ತಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಕಂಬಿ ಎಣಿಸುತ್ತಿದ್ದಾನೆ.
ನನ್ನ ತಂದೆ ಕಳೆದ 4 ವರ್ಷಗಳಿಂದಲೂ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಈ ವಿಷಯವನ್ನು ನನ್ನ ತಾಯಿ ಬಳಿ ಹೇಳಿಕೊಂಡಾಗ ಆಕೆ ನನ್ನ ಮಾತನ್ನು ನಂಬುತ್ತಿರಲಿಲ್ಲ. ಹೀಗಾಗಿ ಗೆಳೆತಿಯ ಸಹಾಯದಿಂದ ವಿಡಿಯೋ ಮಾಡಿಕೊಂಡಿದ್ದೆ. ನನ್ನ ತಂದೆ ಶಿಕ್ಷೆಯಾಗಬೇಕು ಎಂದು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಹೇಳಿಕೊಂಡಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


