ಮಗನಿಗೆ 18 ವರ್ಷವಾಗುವವರೆಗೆ ಮಾತ್ರ ಸಾಕಬೇಕು: ಗುಜರಾತ್ ಹೈಕೋರ್ಟ್
ಮಗನಿಗೆ 18 ವರ್ಷವಾಗುವವರೆಗೆ ಮಾತ್ರ ಪೋಷಕರು ಸಾಕಬೇಕು, ಅನಂತರ ಅವರನ್ನು ಸಾಕುವ ಅವಶ್ಯಕತೆ ಇಲ್ಲ ಎಂದು ಗುಜರಾತ್ ಹೈಕೋರ್ಟ್...

ಅಹಮದಾಬಾದ್: ಮಗನಿಗೆ 18 ವರ್ಷವಾಗುವವರೆಗೆ ಮಾತ್ರ ಪೋಷಕರು ಸಾಕಬೇಕು, ಅನಂತರ ಅವರನ್ನು ಸಾಕುವ ಅವಶ್ಯಕತೆ ಇಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.
ವೈದ್ಯ ದಂಪತಿಯ ವಿಚ್ಥೇದನ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಈ ತೀರ್ಪು ನೀಡಿರುವ ನ್ಯಾಯಪೀಠ, ವಿವಾಹವಾಗುವವರೆಗೆ ಮಗಳ ಪೂರ್ಣ ಜವಾಬ್ದಾರಿಯನ್ನು ಪೋಷಕರೇ ಹೊರಬೇಕು. ಆದರೆ ಈ ನಿಯಮ ಮಗನಿಗೆ ಅನ್ವಯವಾಗುವುದಿಲ್ಲ. ಮಗನಿಗೆ 18 ವರ್ಷ ತುಂಬಿದ ನಂತರ ಆತನ ಯಾವುದೇ ಹಣಕಾಸಿನ ಜವಾಬ್ದಾರಿ ತೆಗೆದುಕೊಳ್ಳಬಾರದು ಎಂದು ಹೇಳಿದೆ. ಒಂದು ವೇಳೆ ಗಂಡು ಮಗ ಮಾನಸಿಕ ಹಾಗೂ ದೈಹಿಕ ಅಸ್ವಸ್ಥನಾಗಿದ್ದರೆ ಮಾತ್ರ ಪೋಷಕರು ಜವಾಬ್ದಾರಿ ಹೊರಬಹುದು ಎಂದು ಹೇಳಿದೆ.
ದಿನೇಶ್ ಓಜಾ ಎಂಬುವರ ವಿರುದ್ಧ ಪತ್ನಿ 2006 ರಲ್ಲಿ ಎಫ್ ಐಆರ್ ದಾಖಲಿಸಿದ್ದರು. ಮತ್ತೊಂದೆಡೆ ವೈದ್ಯರಾದ ದಿನೇಶ್ ಓಜಾ ತಮ್ಮ ಪತ್ನಿಯಿಂದ ವಿಚ್ಛೇದನ ಕೊಡಿಸುವಂತೆ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಜೀವನ ನಿರ್ವಹಣೆಗೆಂದು ತಮಗೆ ಹಾಗೂ ಮಗನಿಗೆ ಪರಿಹಾರ ಕೊಡಿಸಬೇಕೆಂದು ಪತ್ನಿ ನೀತಾ ಕೋರ್ಟಿಗೆ ಮನವಿ ಮಾಡಿದ್ದರು. ಮಗನಿಗೆ 18 ವರ್ಷಆಗುವವರೆಗೆ ನಿರ್ವಹಣಾ ವೆಚ್ಚ ಭರಿಸಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು.
ಅದರಂತೆ ವೈದ್ಯರು ಮಗನಿಗೆ 18 ವರ್ಷ ವಯಸ್ಸು ಆದ ನಂತರ ಮಗನಿಗೆ ಹಣ ನೀಡುವುದನ್ನು ನಿಲ್ಲಿಸಿದರು. ಇದನ್ನು ಪ್ರಶ್ನಿಸಿ ನೀತಾ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ ಮಗನಿಗೆ 18 ವರ್ಷವಾಗುವವರೆಗೆ ಮಾತ್ರ ಪೋಷಕರು ಸಾಕಬೇಕು. ಆ ನಂತರ ಅವರೇ ಅವರ ಜೀವನ ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


