ಫ್ಲಿಪ್‌ಕಾರ್ಟ್ ಸಿಇಒ ಬಿನ್ನಿ ಬನ್ಸಾಲ್ ಅವರ ಇಮೇಲ್ ಖಾತೆ ಹ್ಯಾಕ್ ಆಗಿಲ್ಲ
ಫ್ಲಿಪ್‌ಕಾರ್ಟ್ ಸಿಇಒ ಬಿನ್ನಿ ಬನ್ಸಾಲ್ ಅವರ ಇಮೇಲ್ ಖಾತೆ ಹ್ಯಾಕ್ ಆಗಿಲ್ಲ, ಬದಲು ನಕಲಿ ಖಾತೆ ಸೃಷ್ಟಿ ಮಾಡಲಾಗಿದೆ ಎಂದು ಫ್ಲಿಪ್‌ಕಾರ್ಟ್...

Published On :
ನವದೆಹಲಿ: ಫ್ಲಿಪ್‌ಕಾರ್ಟ್ ಸಿಇಒ ಬಿನ್ನಿ ಬನ್ಸಾಲ್ ಅವರ ಇಮೇಲ್ ಖಾತೆ ಹ್ಯಾಕ್ ಆಗಿಲ್ಲ, ಬದಲು ನಕಲಿ ಖಾತೆ ಸೃಷ್ಟಿ ಮಾಡಲಾಗಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿಕೆ ನೀಡಿದೆ.
ಬಿನ್ನಿ ಬನ್ಸಾಲ್ ಅವರ ಇಮೇಲ್ ಖಾತೆಯನ್ನು ಹ್ಯಾಕ್ ಮಾಡಲಾಗಿಲ್ಲ. ಫ್ಲಿಪ್‌ಕಾರ್ಟ್‌ನ ಕಾರ್ಪರೇಟ್ ಇಮೇಲ್ ವ್ಯವಸ್ಥೆಯನ್ನು ಅಷ್ಟೊಂದು ಸುಲಭವಾಗಿ ಹ್ಯಾಕ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹೆಸರು ಮತ್ತು ವಿಳಾಸವನ್ನು ಮಾತ್ರ ಬಳಸಿ ನಕಲಿ ಇಮೇಲ್ ಖಾತೆಯನ್ನು ಸೃಷ್ಟಿಸಲಾಗಿದೆ ಎಂದು ಪ್ರಸ್ತುತ ಸಂಸ್ಥೆ ನೀಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಖ್ಯಾತ ಸುದ್ದಿ ಪತ್ರಿಕೆಯೊಂದು ಶುಕ್ರವಾರ ಬನ್ಸಾಲ್ ಅವರ ಇಮೇಲ್ ಖಾತೆ ಹ್ಯಾಕ್ ಆಗಿದೆ. ಈ ಇಮೇಲ್ ನಿಂದ ಫ್ಲಿಪ್‌ಕಾರ್ಟ್ ಸಿಎಫ್‌ಒ ಸಂಜಯ್ ಬವೇಜಾ ಅವರಿಗೆ ಮಾರ್ಚ್ 1ರಂದು ಬೆಳಗ್ಗೆ 11.33ಕ್ಕೆ ಮೇಲ್ ಕಳಿಸಿ 80,000 ಡಾಲರ್ ಕಳಿಸುವಂತೆ ಕೇಳಲಾಗಿತ್ತು ಎಂದು ಸುದ್ದಿ ಪ್ರಕಟಿಸಿತ್ತು.
ಆದರೆ ಬನ್ಸಾಲ್ ಅವರ ಖಾತೆಯನ್ನು ಹ್ಯಾಕ್ ಮಾಡಿಲ್ಲ, ನಕಲಿ ಖಾತೆಯನ್ನು ಸೃಷ್ಟಿಸಿ ಈ ಕೃತ್ಯವೆಸಗಲಾಗಿದೆ.
ಏತನ್ಮಧ್ಯೆ, ನಕಲಿ ಖಾತೆ ಸೃಷ್ಟಿಸಿದವರ ವಿರುದ್ಧ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಫ್ಲಿಪ್‌ಕಾರ್ಟ್ ಕಂಪನಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


