ದೇಶ

ಸಾಮಾಜಿಕ ಮಾಧ್ಯಮದಲ್ಲಿ ಮೋಹನ್ ಭಾಗವತ್ ಅಸಭ್ಯ ಫೋಟೋ: ಇಬ್ಬರ ಬಂಧನ

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವಿಕೃತವಾಗಿ ರೂಪಿಸಿ ಹಾಕಿದ್ದ ಇಬ್ಬರನ್ನು ಮಧ್ಯಪ್ರದೇಶ ...

ಸಾಮಾಜಿಕ ಮಾಧ್ಯಮದಲ್ಲಿ ಮೋಹನ್ ಭಾಗವತ್ ಅಸಭ್ಯ ಫೋಟೋ: ಇಬ್ಬರ ಬಂಧನ
ಮೋಹನ್ ಭಾಗವತ್
Published On :

ಭೋಪಾಲ್‌ : ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವಿಕೃತವಾಗಿ ರೂಪಿಸಿ ಹಾಕಿದ್ದ ಇಬ್ಬರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.

22 ವರ್ಷದ  ಶಕೀರ್‌ ಯೂನುಸ್‌ ಬಂಥಿಯಾ ಮತ್ತು ಕಾಲೇಜು ವಿದ್ಯಾರ್ಥಿ ವಾಸೀಂ ಶೇಖ್‌ ಅವರನ್ನು ಬಂಧಿಸಿದ್ದಾರೆ. ಇವರಿಬ್ಬರೂ ಮಧ್ಯ ಪ್ರದೇಶದ ಖರಗೋನ್‌ ನಿವಾಸಿಗಳಾಗಿದ್ದಾರೆ.

ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಚಿತ್ರದ ಮುಖವನ್ನು ಉಳಿಸಿಕೊಂಡು ಅದರ ಕೆಳಭಾಗಕ್ಕೆ ಮಹಿಳೆಯ ಚಿತ್ರದ ಶರೀರದ ಭಾಗವನ್ನು ಜೋಡಿಸಿ ಅಪ್‌ಲೋಡ್‌ ಮಾಡಲಾಗಿದೆ.  ಭಾಗವತ್‌ ಚಿತ್ರಕ್ಕೆ ಜೋಡಿಸಲ್ಪಟ್ಟ ಮಹಿಳೆಯ ಚಿತ್ರದಲ್ಲಿ ಮಹಿಳೆಯು ಮೈಗೆ ಅಂಟಿಕೊಂಡಿರುವ ಕಂದು ಬಣ್ಣದ ಪ್ಯಾಂಟ್‌ ಮತ್ತು ಬಳಿ ಬಣ್ಣದ ಶರ್ಟ್‌ ತೊಟ್ಟಿದ್ದಾಳೆ.

ಆರೋಪಿಗಳು ತಮ್ಮ ಈ ಕೃತ್ಯದ ಮೂಲಕ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದು  ಸಾಮಾಜಿಕ ಜಾಲ ತಾಣಗಳಲ್ಲಿ ಅಶ್ಲೀಲ ವಿಚಾರಗಳನ್ನು ಹಾಕಿದ್ದಾರೆ ಎಂದು ಖರಗೋನ್‌ ಪೊಲೀಸ್‌ ಸುಪರಿಂಟೆಂಡೆಂಟ್‌ ಅಮಿತ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.

ರಜನೀಶ್‌ ನಿಂಬಾಳ್ಕರ್‌ ಎಂಬ ಆರ್‌ಎಸ್‌ಎಸ್‌ ಕಾರ್ಯಕರ್ತರು ಈ ಬಗ್ಗೆ  ದೂರು ನೀಡಿದ್ದು ಆ ಪ್ರಕಾರ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆ.67 ಮತ್ತು ಐಪಿಸಿ ಸೆ.505(2) ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.