ದೇಶ

ನಟ ಕಲಾಭವನ್ ಮಣಿ ನಿಗೂಢ ಸಾವು: ದೇಹದಲ್ಲಿ ಕೀಟನಾಶಕ ಪತ್ತೆ

ರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಮಣಿಯ ದೇಹದಲ್ಲಿ ಕೀಟನಾಶಕ, ಎಥೆನಾಲ್ ಮತ್ತು ಮೆಥನಾಲ್ ಪತ್ತೆಯಾಗಿದೆ...

ನಟ ಕಲಾಭವನ್ ಮಣಿ ನಿಗೂಢ ಸಾವು: ದೇಹದಲ್ಲಿ ಕೀಟನಾಶಕ ಪತ್ತೆ
ಕಲಾಭವನ ಮಣಿ
Published On :
ಚಾಲಕ್ಕುಡಿ (ಕೇರಳ):  ಮಾರ್ಚ್ 6 ರಂದು ಕೊಚ್ಚಿಯಲ್ಲಿ ಸಾವಿಗೀಡಾದ ಮಲಯಾಳಂ ನಟ ಕಲಾಭವನ ಮಣಿ ಸಾವಿಗೆ ಸಂಬಂಧಿಸಿದಂತೆ ಹಲವು ನಿಗೂಢ ರಹಸ್ಯಗಳು ಬಯಲಾಗತೊಡಗಿವೆ. ಈ ಹಿಂದೆ ಕಲಾಭವನ ಮಣಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಮಣಿಯ ದೇಹದಲ್ಲಿ  ಕೀಟನಾಶಕ, ಎಥೆನಾಲ್ ಮತ್ತು ಮೆಥನಾಲ್ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಕೊಚ್ಚಿಯ ಕಾಕನಾಡ್ ರೀಜಿನಲ್ ಕೆಮ್‌ಕಲ್ ಎಕ್ಸಾಮಿನರ್ಸ್ ಲ್ಯಾಬೋರೇಟರಿಯಲ್ಲಿ ಟಾಕ್ಸಿಕೋಲಜಿ ಪರೀಕ್ಷೆ ನಡೆಸಿದ್ದು, ಮಣಿಯ ದೇಹದಲ್ಲಿ ರಾಸಾಯನಿಕ ಪದಾರ್ಥದ ಅಂಶಗಳು ಪತ್ತೆಯಾಗಿರುವುದನ್ನು ದೃಢೀಕರಿಸಲಾಗಿದೆ.
ಕರುಳು ರೋಗದಿಂದ ಬಳಲುತ್ತಿದ್ದ ಮಣಿ ಈ ರೀತಿ ಸಾವಿಗೀಡಾಗಿರುವ ಬಗ್ಗೆ ನಮಗೆ ಸಂಶಯ ಇದೆ ಎಂದು ಮಣಿಯ ಪತ್ನಿ ನಿಮ್ಮಿ ಹೇಳಿರುವುದರಿಂದ ಈ ರಾಸಾಯನಿಕ ಪರೀಕ್ಷೆ ನಡೆಸಲಾಗಿತ್ತು.
ನಿಗೂಢ ಸಾವು ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದು, ಮಣಿಯ ಸ್ನೇಹಿತರನ್ನು ವಿಚಾರಣೆಗೊಳಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.