ದೇಶ

ಎಲ್ಲಕ್ಕಿಂತ ಬಿಜೆಪಿಯೇ ಅತ್ಯಂತ ರಾಷ್ಟ್ರ ವಿರೋಧಿ: ಕೇಜ್ರಿವಾಲ್ ಟ್ವೀಟ್

ಎಲ್ಲಕ್ಕಿಂತ ಭಾರತೀಯ ಜನತಾ ಪಕ್ಷ(ಬಿಜೆಪಿ)ವೇ ಅತ್ಯಂತ ರಾಷ್ಟ್ರ ವಿರೋಧಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್...

ಎಲ್ಲಕ್ಕಿಂತ ಬಿಜೆಪಿಯೇ ಅತ್ಯಂತ ರಾಷ್ಟ್ರ ವಿರೋಧಿ: ಕೇಜ್ರಿವಾಲ್ ಟ್ವೀಟ್
ಅರವಿಂದ್ ಕೇಜ್ರಿವಾಲ್
Published On :
ನವದೆಹಲಿ: ಎಲ್ಲಕ್ಕಿಂತ ಭಾರತೀಯ ಜನತಾ ಪಕ್ಷ(ಬಿಜೆಪಿ)ವೇ ಅತ್ಯಂತ ರಾಷ್ಟ್ರ ವಿರೋಧಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಬುಧವಾರ ಬೆಳಿಗ್ಗೆ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ ಕೇಜ್ರಿವಾಲ್, ಎಲ್ಲಕ್ಕಿಂತ ಬಿಜೆಪಿ ಅತ್ಯಂತ ರಾಷ್ಟ್ರವಿರೋಧಿ. ಅಷ್ಟೇ ಅಲ್ಲದೇ, ಜೆಎನ್ ಯು ಕ್ಯಾಂಪಸ್ ನಲ್ಲಿ ರಾಷ್ಟವಿರೋಧಿ ಘೋಷಣೆ ಕೂಗಿದವರನ್ನು ರಕ್ಷಿಸುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ದೇಶ ವಿರೋಧಿ ಘೋಷಣೆ ಕೂಗಿದವರು ಕಾಶ್ಮೀರದವರು. ಆದರೆ, ಅವರನ್ನು ಬಿಜೆಪಿ ರಕ್ಷಿಸುತ್ತಿದೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರನ್ನು ಬೇಸರ ಪಡಿಸಲು ಬಿಜೆಪಿಗೆ ಇಷ್ಟವಿಲ್ಲ. ಹಾಗಾಗಿ, ನಿಜವಾದ ಆರೋಪಿಗಳ ರಕ್ಷಣೆ ಮಾಡುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ. 
ಈ ಹಿಂದೆ ಕೇಜ್ರಿವಾಲ್ ಅವರು ''ನಾನು ಮೋದಿಯವರಿಗಿಂತ ದೊಡ್ಡ ದೇಶಭಕ್ತ. ದೇಶವನ್ನು ಒಡೆಯುತ್ತೇವೆ ಎಂದು ಘೋಷಣೆ ಕೂಗಿದವರನ್ನು ಯಾಕೆ ಇಲ್ಲಿಯವರೆಗೆ ಬಂಧಿಸಿಲ್ಲ ಎಂದು ನಾನು ಕೇಳುತ್ತೇನೆ. ಯಾಕೆಂದರೆ ಅವರು ಕಾಶ್ಮೀರದವರು. ಅವರನ್ನು ಬಂಧಿಸಿದರೆ ಮೆಹಬೂಬ ಮುಫ್ತಿ ಮುನಿಸಿಕೊಳ್ಳುತ್ತಾರೆ'' ಎಂದು ಟ್ವೀಟ್ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.