ಸಾಲ ಮರು ಪಾವತಿಸದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ; ರೈತ ಆತ್ಮಹತ್ಯೆ
ತಮಿಳ್ನಾಡಿನ ಅರಿಯಲೂರ್ ಜಿಲ್ಲೆಯಲ್ಲಿ ರು. 1.9 ಲಕ್ಷ ಸಾಲ ಮರು ಪಾವತಿ ಮಾಡಲಾರದೆ ಕಂಗೆಟ್ಟ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ...

Published On :
ಅರಿಯಲೂರ್: ತಮಿಳ್ನಾಡಿನ ಅರಿಯಲೂರ್ ಜಿಲ್ಲೆಯಲ್ಲಿ ರು. 1.9 ಲಕ್ಷ ಸಾಲ ಮರು ಪಾವತಿ ಮಾಡಲಾರದೆ ಕಂಗೆಟ್ಟ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅಳಗರ್ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಲ ಮರುಪಾವತಿ ಮಾಡದೇ ಇದ್ದಾಗ ಸಾಲ ವಸೂಲಾತಿಯವರು ಈತನ ಟ್ರ್ಯಾಕ್ಟರ್‌ನ್ನು ಜಪ್ತಿ ಮಾಡಿಕೊಂಡಿದ್ದರು.
ವರದಿಗಳ ಪ್ರಕಾರ ಖಾಸಗಿ ಫೈನಾನ್ಸ್ ಕಂಪನಿಯೊಂದರಿಂದ ಅಳಗರ್ ರು. 7 ಲಕ್ಷ ಸಾಲ ಪಡೆದಿದ್ದರು. ಇದರಲ್ಲಿ ರು. 5.10 ಲಕ್ಷವನ್ನು ಮರುಪಾವತಿ ಮಾಡಿದ್ದು, ಇನ್ನುಳಿದ ದುಡ್ಡು ಪಾವತಿ ಮಾಡಲು ಬಾಕಿಯಿತ್ತು.
ಸಾಲ ಮರುಪಾವತಿ ಮಾಡದೇ ಇದ್ದಾಗ ಸಾಲವಸೂಲಾತಿ ಮಾಡುವವರು ಈತನ ಟ್ಯಾಕ್ರರ್ ನ್ನು ವಶ ಪಡಿಸಿಕೊಂಡಿದ್ದಾರೆ.
ಇದರಿಂದ ಮನನೊಂದ ಅಳಗರ್ ವಿಷ ಸೇವಿಸಿ ಆತ್ಮಹತ್ಯೆಗೈದಿದ್ದಾರೆ.
ತನ್ನ ಮಗ ರು. 5.10 ಲಕ್ಷ ಸಾಲವನ್ನು ಮರುಪಾವತಿ ಮಾಡಿದ್ದಾನೆ. ಇತ್ತ ಬೆಳೆ ನಾಶವಾಗಿದ್ದರಿಂದ ಉಳಿದ ಹಣವನ್ನು ಪಾವತಿ ಮಾಡಲಾಗಿಲ್ಲ. ನಾನು ಹಲವಾರು ಬಾರಿ ಫೈನಾನ್ಸ್ ಕಂಪನಿಗೆ ಹೋಗಿ ಸಾಲ ಮರುಪಾವತಿಗಾಗಿ ಒಂದಷ್ಟು ಕಾಲಾವಕಾಶ ಕೊಡಿ ಎಂದು ಕೇಳಿ ಕೊಂಡಿದ್ದೆ. ಆದರೆ ಅವರು ಟ್ರ್ಯಾಕ್ಟರ್ ನ್ನೇ ವಶ ಪಡಿಸಿಕೊಂಡು ಹೋದರು. ನನ್ನ ಮಗನನ್ನು ನೂರು ಮಂದಿಯ ಮುಂದೆ ಅವಮಾನ ಮಾಡಲಾಯಿತು. ಇದನ್ನು ಸಹಿಸಲು ಸಾಧ್ಯವಾಗದೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಾನು ಆ ಸಾಲವನ್ನು ಪಾವತಿಸುತ್ತೇನೆ. ಆದರೆ ನನಗೆ ನನ್ನ ಮಗ ವಾಪಸ್ ಸಿಗುತ್ತಾನೆಯೇ? ಎಂದು ಅಳಗರ್ ಅವರ ಅಪ್ಪ ಕಣ್ಣೀರು ಹಾಕಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಪ್ರಕಾರ 306, 506(2), 294(ಬಿ), 323 ಮತ್ತು 34 ಸೆಕ್ಷನ್ ಅಡಿಯಲ್ಲಿ ಏಳು ಜನರ ವಿರುದ್ಧ ಕೇಸು ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


