ದೇಶ

ಗೋವಾ ಡಿಫೆನ್ಸ್ ಎಕ್ಸ್ ಪೋ ನಲ್ಲಿ ಭಾಗವಹಿಸಲು 46 ದೇಶಗಳ 977 ಕಂಪನಿಗಳ ನೋಂದಣಿ

ಮಾರ್ಚ್ 28 ರಿಂದ 31 ವರೆಗೆ ಗೋವಾದಲ್ಲಿ ನಡೆಯಲಿರುವ ಡಿಫೆನ್ಸ್ ಎಕ್ಸ್ ಪೋ ಕಾರ್ಯಕ್ರಮದಲ್ಲಿ ಭಾಗವಹಿಸಲು 46 ದೇಶಗಳ 977 ಕಂಪನಿಗಳು ನೋಂದಣಿ ಮಾಡಿಕೊಂಡಿವೆ.

ಗೋವಾ ಡಿಫೆನ್ಸ್ ಎಕ್ಸ್ ಪೋ ನಲ್ಲಿ ಭಾಗವಹಿಸಲು 46 ದೇಶಗಳ 977 ಕಂಪನಿಗಳ ನೋಂದಣಿ
ಡಿಫೆನ್ಸ್ ಎಕ್ಸ್ ಪೋ- 2016
Published On :

ಪಣಜಿ: ಮಾರ್ಚ್ 28 ರಿಂದ 31 ವರೆಗೆ ಗೋವಾದಲ್ಲಿ ನಡೆಯಲಿರುವ ಡಿಫೆನ್ಸ್ ಎಕ್ಸ್ ಪೋ ಕಾರ್ಯಕ್ರಮದಲ್ಲಿ ಭಾಗವಹಿಸಲು 46 ದೇಶಗಳ 977 ಕಂಪನಿಗಳು ನೋಂದಣಿ ಮಾಡಿಕೊಂಡಿವೆ.

ಡಿಫೆನ್ಸ್ ಎಕ್ಸ್ ಪೋ ಕಾರ್ಯಕ್ರಮ ರಕ್ಷಣಾ ಇಲಾಖೆಯನ್ನು ಸ್ಥಿರ ಬೆಳವಣಿಗೆಯ ಪಥದಲ್ಲಿ ಮುನ್ನಡೆಸುತ್ತದೆ ಎಂದು ರಕ್ಷಣಾ ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ. ಡಿಫ್ ಎಕ್ಸ್ ಪೋ ಇಂಡಿಯಾ 2016 ಗೋವಾದ ಕ್ಯುಪೆಂ ಜಿಲ್ಲೆಯ ನಾಕ್ಯುರಿ- ಬೆತುಲ್‌ ಬಳಿ ನಡೆಯಲಿದೆ.

ಡಿಫ್ ಎಕ್ಸ್ ಪೋ ಇಂಡಿಯಾ-2016 ಸ್ಥಿರ ಬೆಳವಣಿಗೆಯ ಪಥದಲ್ಲಿ ಮುನ್ನಡೆಸುವ ಕಾರ್ಯಕ್ರಮವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಗಾಧ ಮತ್ತು ಅಭೂತಪೂರ್ವ ಅಂತರರಾಷ್ಟ್ರೀಯ ಪ್ರತಿಕ್ರಿಯೆಯನ್ನು ಗಳಿಸಿದೆ ಎಂದು ಎಕ್ಸ್ ಪೋಗಾಗಿ ತಯಾರಿಸಲಾಗಿರುವ ರಕ್ಷಣಾ ಇಲಾಖೆಯ ವೆಬ್ ಸೈಟ್ ತಿಳಿಸಿದೆ. ದೆಹಲಿಯಲ್ಲಿ ನಡೆಯುತ್ತಿದ್ದ ಎಕ್ಸ್ ಪೋ ಇದೇ ಮೊದಲ ಬಾರಿಗೆ ಗೋವಾದಲ್ಲಿ ನಡೆಯಲಿದ್ದು, ಅಮೆರಿಕ, ರಷ್ಯಾ, ಸ್ವೀಡನ್, ರಿಪಬ್ಲಿಕ್ ಆಫ್ ಕೊರಿಯಾ, ಸ್ವಿಜರ್ಲ್ಯಾಂಡ್, ಯುಎಇ ಹಾಗೂ ಪೋರ್ಚುಗಲ್ ರಾಷ್ಟ್ರಗಳು ಎಕ್ಸ್ ಪೋದಲ್ಲಿ ಭಾಗವಹಿಸಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.