ದೇಶ

ಐಟಂ ಸಾಂಗ್ ಗೆ ಡ್ಯಾನ್ಸ್ ಮಾಡುವಂತೆ ವಧುವಿಗೆ ಒತ್ತಾಯ: ಪೊಲೀಸರ ಅತಿಥಿಯಾದ ವರ

ಮದುವೆ ಸಮಾರಂಭದಲ್ಲಿ ಐಟಂ ಸಾಂಗ್ ಗೆ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿದ್ದರಿಂದ ಆಕ್ರೋಶಗೊಂಡ ವಧು ಪೊಲೀಸ್ ಠಾಣೆಗ ದೂರು ನೀಡಿ ವರನಿಗೆ ..

ಐಟಂ ಸಾಂಗ್ ಗೆ ಡ್ಯಾನ್ಸ್  ಮಾಡುವಂತೆ ವಧುವಿಗೆ ಒತ್ತಾಯ: ಪೊಲೀಸರ ಅತಿಥಿಯಾದ ವರ
ಸಾಂದರ್ಭಿಕ ಚಿತ್ರ
Published On :

ಆಗ್ರಾ: ಮದುವೆ ಸಮಾರಂಭದಲ್ಲಿ ಐಟಂ ಸಾಂಗ್ ಗೆ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿದ್ದರಿಂದ ಆಕ್ರೋಶಗೊಂಡ ವಧು ಪೊಲೀಸ್ ಠಾಣೆಗ ದೂರು ನೀಡಿ ವರನಿಗೆ ಕೋಳ ಹಾಕಿಸಿರುವ ಘಟನೆ ಫಿರೋಜಾಬಾದ್ ನಲ್ಲಿ ನಡೆದಿದೆ.

ಫಿರೋಜಾಬಾದ್‌‌ನ ವರ ತನ್ನ ಮದುವೆ ಸಂದರ್ಭದಲ್ಲಿ ಗೆಳೆಯರ ಒತ್ತಾಯಕ್ಕೆ ಮಣಿದು ಮದುವೆ ಮಂಟಪದಲ್ಲಿ ಡ್ಯಾನ್ಸ್ ಮಾಡಿದ್ದಾನೆ. ಈ ವೇಳೆ ಗೆಳೆಯರ ಅಣಿತಿಯಂತೆ ಪತ್ನಿಯನ್ನೂ ಕುಣಿಯಲು ಒತ್ತಾಯಿಸಿದ್ದಾನೆ. ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ವಧು ಡ್ಯಾನ್ಸ್ ಮಾಡಲು ನಿರಾಕರಿಸಿದ್ದಾಳೆ.  ಆದರೆ ಆಕೆಯನ್ನು ಬಿಡದ ವರ  ಕೈ ಹಿಡಿದು ಎಳೆದಿದ್ದಾನ. ಕೂಡಲೇ ವಧುವಿನ ಸಹಾಯಕ್ಕೆ ಧಾವಿಸಿದ ಆಕೆಯ ಚಿಕ್ಕಪ್ಪನಿಗೆ  ವರ ಕಪಾಳಕ್ಕೆ ಬಾರಿಸಿ ಹಿಂದೆ ಸರಿಯುವಂತೆ ಗದರಿದ್ದಾನೆ.

ಇದರಿಂದ ಇಡೀ ಮದುವೆ ಮಂಟಪ ಕೆಲ ಹೊತ್ತು ಸ್ತಬ್ಧವಾಗಿದೆ. ಕೈ ಹಿಡಿದು ಕಾಪಾಡಬೇಕಿದ್ದ ಗಂಡ ಹೀಗೆ ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿದ್ದರ ಹಿನ್ನೆಲೆಯಲ್ಲಿ ವಧು ಮದುವೆಗೆ ನಿರಾಕರಿಸಿದ್ದಾಳೆ. ಇಷ್ಟೇ ಅಲ್ಲದೇ ಕೂಡಲೇ ಪೊಲೀಸರಿಗೆ ಫೋನ್ ಮಾಡಿ ವರನ ವಿರುದ್ಧ ದೂರು ನೀಡಿದ್ದಾಳೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ವರನನ್ನು ವಶಕ್ಕೆ ಪಡೆದಿದ್ದಾರೆ.ಸದ್ಯ ಯುವತಿ ನೀಡಿದ ದೂರನ್ನು ಸ್ವೀಕರಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.