2010ರಲ್ಲಿ ಮಲ್ಯ ಬಳಿ ಇದ್ದದ್ದು ಕೇವಲ ರು.9,500!
ಇತ್ತಿಚೆಗಷ್ಟೇ ರು.615 ಕೋಟಿ ಆಸ್ತಿಯಿದೆ ಎಂದು ಘೋಷಿಸಿದ್ದ ವಿಜಯ್ ಮಲ್ಯ 2010ರಲ್ಲಿ ರಾಜ್ಯಸಭೆಗೆ ಆಯ್ಕೆ ವೇಳೆ ತನ್ನ ಬಳಿ...

Published On :
ನವದೆಹಲಿ: ಇತ್ತಿಚೆಗಷ್ಟೇ ರು.615 ಕೋಟಿ ಆಸ್ತಿಯಿದೆ ಎಂದು ಘೋಷಿಸಿದ್ದ ವಿಜಯ್ ಮಲ್ಯ 2010ರಲ್ಲಿ ರಾಜ್ಯಸಭೆಗೆ ಆಯ್ಕೆ ವೇಳೆ ತನ್ನ ಬಳಿ ಕೇವಲ ರು.9500 ನಗದು ಇದೆ ಎಂದು ದಾಖಲೆ ನೀಡಿದ್ದರು.
2010ರಲ್ಲಿ ಕರ್ನಾಟಕ ರಾಜ್ಯಸಭೆಗೆ ಆಯ್ಕೆ ಮಾಡುವ ವೇಳೆ ಸಲ್ಲಿಸಬೇಕಿದ್ದ ಆಸ್ತಿ ವಿವರದ ದಾಖಲೆಯಲ್ಲಿ ಮಲ್ಯ ಅವರು, ತನಗೆ ಮನೆ, ಭೂಮಿ ಹಾಗೂ ಇತರೆ ಯಾವುದೇ ಆಸ್ತಿಯಿಲ್ಲ. ನನ್ನ ಬಳಿ ಕೇವಲ ರು.9500 ನಗದು ಎಂದು ದಾಖಲೆ ಸಲ್ಲಿಸಿದ್ದರು.
ಇತ್ತೀಚೆಗಷ್ಟೇ ಮಲ್ಯ ಅವರು, ತಮ್ಮ ಬಳಿ, ಗೋವಾ, ಮುಂಬೈ, ಫ್ರಾನ್ಸ್, ಬ್ರಿಟನ್ ಗಳಲ್ಲಿ ಮನೆ, ಡಿಬೆಂಚರ್, ಡೆಪಾಸಿಟ್, ಫೆರಾರಿ ಕಾರುಗಳು, ಜ್ಯುವೆಲ್ಲರಿ, ಶೇರುಗಳು ಸೇರಿದಂತೆ ಒಟ್ಟು ರು.615 ಕೋಟಿ ಆಸ್ತಿಯನ್ನು ಹೊಂದಿರುವುದಾಗಿ ತಿಳಿಸಿದ್ದರು.
ಘೋಷಿತ ಮೊತ್ತದಲ್ಲಿ ರು.4 ಕೋಟಿ ಬ್ಯಾಂಕ್ ಠೇವಣಿಗಳಲ್ಲಿ 591 ಕೋಟಿ ಬಾಂಡ್ ಗಳು, ಶೇರುಗಳು. ಯುನೈಟೆಡ್ ಬ್ರೂವರೀಸ್, ಕಿಂಗ್ಫಿಷರ್ ಏರ್ಲೈನ್ಸ್ ಮೆಕ್ಡೊವೆಲ್ ಹೋಲ್ಡಿಂಗ್ಸ್ ಲಿಮಿಟೆಡ್, ಯುನೈಟೆಡ್ ರೇಸಿಂಗ್ ಮತ್ತು ಬ್ಲಡ್ ಸ್ಟಾಕ್ ಬ್ರೀಡರ್ಸ್, ಗಣಪತಿ ಮಲ್ಯ ಇನ್ವೆಸ್ಟ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್, ಕಿಂಗ್ಫಿಶರ್ ತರಬೇತಿ ಮತ್ತುಏವಿಯೇಷನ್ ಸರ್ವಿಸಸ್ ಮತ್ತು ವಿಜೆಎಂ ಇನ್ವೆಸ್ಟ್ಮೆಂಟ್ಸ್ ಕಂಪನಿಗಳಲ್ಲಿ ಷೇರು ಹೊಂದಿರುವುದಾಗಿ ಘೋಷಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


