ಅದಾನಿ ಸಂಸ್ಥೆಗೆ ಅನುಕೂಲ ಮಾಡಲು ಭೂಮಿಯ ದರ ಇಳಿಕೆ: ಜಾರ್ಖಂಡ್ ವಿಪಕ್ಷಗಳ ಆರೋಪ
ಜಾರ್ಖಂಡ್ ನಲ್ಲಿ ಉದ್ಯಮಿ ಅದಾನಿ ಅವರಿಗೆ ಅನುಕೂಲ ಮಾಡುವುದಕ್ಕಾಗಿ ಭೂಮಿಯ ದರವನ್ನು ಇಳಿಸಲಾಗಿದೆ ಎಂಬ ಆರೋಪ ವಿಧಾನಸಭಾ ಅಧಿವೇಶನದಲ್ಲಿ ಕೇಳಿಬಂದಿದೆ.

ರಾಂಚಿ: ಜಾರ್ಖಂಡ್ ನಲ್ಲಿ ಉದ್ಯಮಿ ಅದಾನಿಗೆ ಅನುಕೂಲ ಮಾಡುವುದಕ್ಕಾಗಿ ಭೂಮಿಯ ದರವನ್ನು ಇಳಿಸಲಾಗಿದೆ ಎಂಬ ಆರೋಪ ವಿಧಾನಸಭಾ ಅಧಿವೇಶನದಲ್ಲಿ ಕೇಳಿಬಂದಿದೆ.
ಸಂತಾಲ್ ಪರ್ಗನಾದಲ್ಲಿನ ಭೂಮಿಯ ದರವನ್ನು ಶೇ.80 ರಷ್ಟು ಇಳಿಕೆ ಮಾಡಲಾಗಿದೆ. ಈ ಬಗ್ಗೆ 28 -10 -2015 ರಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಭಾರತದ ಇತಿಹಾಸದಲ್ಲೇ ಭೂಮಿಯ ದರವನ್ನು ಶೇ.80 ರಷ್ಟು ಇಳಿಕೆ ಮಾಡಲಾಗಿದೆ, ಅದಾನಿ ಸಂಸ್ಥೆಗೆ ಅನುಕೂಲ ಮಾಡುವುದೇ ಇದರ ಹಿಂದಿನ ಉದ್ದೇಶ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾದ ಶಾಸಕ ಸ್ಟೀಫನ್ ಮರಾಂಡಿ ಆರೋಪಿಸಿದ್ದಾರೆ.
ಭೂದರವನ್ನು ಕಡಿಮೆ ಮಾಡಿರುವ ಬಗ್ಗೆ ಸ್ಟೀಫನ್ ಮರಾಂಡಿ ನಿಲುವಳಿ ಸೂಚನೆ ಮಂಡಿಸಿದರು, ಆದರೆ ಜಾರ್ಖಂಡ್ ನ ವಿಧಾನಸಭಾಧ್ಯಕ್ಷರು ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ ಕಾರಣ ವಿಪಕ್ಷದವರು ಪ್ರತಿಭಟನೆ ನಡೆಸಿದ್ದರಿಂದ ವಿಧಾನಸಭೆಯಲ್ಲಿ ಕೆಲ ಕಾಲ ಗದ್ದಲ ಉಂಟಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


