ದೇಶ

ಇಂಡೋನೇಷ್ಯಾದಲ್ಲಿ ಸಂಪೂರ್ಣ, ಭಾರತದಲ್ಲಿ ಭಾಗಶಃ ಸೂರ್ಯಗ್ರಹಣ

ಇಂಡೋನೇಷ್ಯಾದಲ್ಲಿ ಸಂಪೂರ್ಣ ಗ್ರಹಣ ಗೋಚರಿಸಿದ್ದು, ಭಾರತದಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸಿದೆ. ಬೆಳಗ್ಗೆ 6.30 ರಿಂದ...

ಇಂಡೋನೇಷ್ಯಾದಲ್ಲಿ ಸಂಪೂರ್ಣ, ಭಾರತದಲ್ಲಿ ಭಾಗಶಃ  ಸೂರ್ಯಗ್ರಹಣ
ಸೂರ್ಯಗ್ರಹಣ
Published On :
ನವದೆಹಲಿ: ಮಾಘ ಬಹುಳ ಅಮಮಾಸ್ಯೆ ದಿನವಾದ ಬುಧವಾರ ಈ ವರ್ಷದ ಮೊಟ್ಟ ಮೊದಲ ಖಗ್ರಾಸ ಸೂರ್ಯ ಗ್ರಹಣ ಸಂಭವಿಸಿದೆ. ಇಂಡೋನೇಷ್ಯಾದಲ್ಲಿ ಸಂಪೂರ್ಣ ಗ್ರಹಣ ಗೋಚರಿಸಿದ್ದು, ಭಾರತದಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸಿದೆ. ಬೆಳಗ್ಗೆ 6.30 ರಿಂದ  10.05ರ ವರೆಗೆ ಭಾರತದಲ್ಲಿ ಗ್ರಹಣ ಸಮಯವಾಗಿತ್ತು. ಚಂದ್ರನು ಸೂರ್ಯ ನ ನೇರ ರೇಖೆಯಲ್ಲಿ ಬಂದದ್ದು ಬೆಳಗ್ಗೆ 7.27 ಆಗಿತ್ತು. ಸೂರ್ಯೋದಯದ ಸಮಯದಲ್ಲಿ ಗ್ರಹಣ ಸಂಭವಿಸಿರುವುದರಿಂದ ಅದು ಭಾಗಶಃ ಗೋಚರವಾಗಿತ್ತು.
ಇಂಡೋನೇಷ್ಯಾದ ಸುಮಾತ್ರಾ, ಬೋರ್‌ನೋ ಪ್ರದೇಶಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಿದೆ. ಇಲ್ಲಿನ ಪ್ರವಾಸಿಗರಿಗೆ ಗ್ರಹಣ ವೀಕ್ಷಣೆಗಾಗಿ ವಿಶೇಷ ಸರ್ವೀಸ್ ಹಡಗುಗಳನ್ನು ಕಲ್ಪಿಸಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ರೀತಿಯ ಕನ್ನಡಕಗಳನ್ನು ವಿತರಿಸಲಾಗಿತ್ತು.
ನಾಸಾ ಸೂರ್ಯಗ್ರಹಣದ ಲೈವ್ ಶೋ ವನ್ನು ತಮ್ಮ ವೆಬ್‌ಸೈಟ್ ನಲ್ಲಿ ಪ್ರಕಟಿಸಿತ್ತು.
ಕಳೆದ ವರ್ಷ ಮಾರ್ಚ್‌ನಲ್ಲಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿತ್ತು. ಪೂರ್ವ ಆಸ್ಟ್ರೇಲಿಯಾ, ದಕ್ಷಿಣ ಏಷ್ಯಾ, ಪೂರ್ವ ಏಷ್ಯಾದ ಹಲವಾರು ಭಾಗಗಳಲ್ಲಿ ಭಾಗಶಃ ಗ್ರಹಣ ಗೋಚರವಾಗಿತ್ತು.
ಭಾರತದಲ್ಲಿ ಭಾಗಶಃ ಸೂರ್ಯಗ್ರಹಣ
ಬೆಳಗ್ಗೆ ಸೂರ್ಯೋದಯದ ವೇಳೆ ಕೆಲವೇ ಕೆಲವು ಕ್ಷಣಗಳ ಕಾಲ ಗ್ರಹಣ ಗೋಚರವಾಗಿತ್ತು. ಕೆಲವೊಂದು ಪ್ರದೇಶಗಳಲ್ಲಿ ಗ್ರಹಣ ಗೋಚರಿಸಿದ್ದರಿಂದ ಅಲ್ಲಿ ಸೂರ್ಯೋದಯ ತಡವಾಗಿತ್ತು.  ದೆಹಲಿಯಲ್ಲಿ ಬೆಳಗ್ಗೆ 6.38ಕ್ಕೆ ಸೂರ್ಯೋದಯವಾಗಿದ್ದು, ಇಲ್ಲಿ  ಗ್ರಹಣ 6.40ಕ್ಕೆ ಆರಂಭವಾಗಿ  6.44 ಕ್ಕೆ ಗ್ರಹಣ ಮೋಕ್ಷವಾಗಿತ್ತು. ಚೆನ್ನೈನಲ್ಲಿ ಬೆಳಗ್ಗೆ  6.20ಕ್ಕೆ ಸೂರ್ಯೋದಯವಾಗಿದ್ದು, 6.22ಕ್ಕೆ ಗ್ರಹಣ ಆರಂಭವಾಗಿ  6.48 ಕ್ಕೆ ಮೋಕ್ಷವಾಗಿತ್ತು.
ಕೊಲ್ಕತ್ತಾದಲ್ಲಿ ಬೆಳಗ್ಗೆ 5.51ಕ್ಕೆ ಸೂರ್ಯೋದಯವಾಗಿದ್ದು,  5. 26ಕ್ಕೆ ಗ್ರಹಣ ಸಂಭವಿಸಿತ್ತು.  6.22ರ ವೇಳೆ ಕಡಿಮೆ ಪ್ರಮಾಣದಲ್ಲಿ ಗ್ರಹಣ ಅನುಭವವಾಗಿ, 6,50ಕ್ಕೆ  ಗ್ರಹಣ ಮೋಕ್ಷವಾಗಿತ್ತು.
ಭಾರತದಲ್ಲಿ ಇನ್ನು ಮುಂದಿನ ಸೂರ್ಯಗ್ರಹಣ 2019 ಡಿಸೆಂಬರ್ 26ರಂದು ಸಂಭವಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.