ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಮಹಡಿಯಿಂದ ಜಿಗಿದ ಯುವತಿ: ಗಾಯಗಳಿಂದ ಪಾರು; ಆರೋಪಿಗಳ ಬಂಧನ
ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಎರಡನೇ ಮಹಡಿಯಿಂದ ಕೆಳಗೆ ಜಿಗಿದು ಯುವತಿಯೊಬ್ಬಳು...

ಕೋಲ್ಕತ್ತಾ: ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಎರಡನೇ ಮಹಡಿಯಿಂದ ಕೆಳಗೆ ಜಿಗಿದು ಯುವತಿಯೊಬ್ಬಳು ಗಾಯಗೊಂಡಿದ್ದು, ಆರೋಪಿಗಳನ್ನು ಪೊಲೀಸರು ಹಿಡಿದಿರುವ ಘಟನೆ ಕೋಲ್ಕತ್ತಾ ಸಮೀಪ ನಿನ್ನೆ ನಡೆದಿದೆ.
ಯುವತಿಯ ಬಾಯ್ ಫ್ರೆಂಡ್ ಮತ್ತು ಆತನ ಸ್ನೇಹಿತರು ಆಕೆಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದರು. ಅವರಿಂದ ತಪ್ಪಿಸಿಕೊಳ್ಳಲು ಹೋದ ಯುವತಿ ಮಹಡಿಯಿಂದ ಜಿಗಿದು ತಲೆಗೆ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಿನ್ನೆ ಸಂಜೆ ಕೋಲ್ಕತ್ತಾ ಸಮೀಪ ಲಿಲುಯಾದಲ್ಲಿ ನಡೆದಿದೆ.
ಆಗಿದ್ದೇನು?: 20 ವರ್ಷದ ಯುವತಿ ಆಕೆಯ ಗೆಳೆಯನನ್ನು ಭೇಟಿಯಾಗಲೆಂದು ಅವನ ಅಪಾರ್ಟ್ ಮೆಂಟ್ ಗೆ ಬಂದಿದ್ದಳು. ಆಗ ಅಲ್ಲಿ ಅವನ ಮತ್ತಿಬ್ಬರು ಗೆಳೆಯರೂ ಇದ್ದರು. ಹೀಗೆ ಮಾತನಾಡುತ್ತಾ ಸ್ವಲ್ಪ ಹೊತ್ತು ಕಳೆದ ನಂತರ ಯುವತಿಗೆ ಮತ್ತು ಬರುವ ಪಾನೀಯವನ್ನು ಕುಡಿಸಿದರು. ನಂತರ ಲೈಂಗಿಕತೆಗೆ ಬಲವಂತ ಮಾಡಿದರು. ಅದಕ್ಕೆ ನಿರಾಕರಿಸಿದ ಯುವತಿ ಕಿರುಚಲು ಆರಂಭಿಸಿದಳು. ಆಗ ಅವರು ಕೊಲ್ಲುವ ಬೆದರಿಕೆಯೊಡ್ಡಿದರು. ಯುವತಿ ಮಹಡಿಗೆ ಓಡಿಹೋಗಿ ಅವರಿಂದ ತಪ್ಪಿಸಿಕೊಳ್ಳಲು ಕೆಳಗೆ ಜಿಗಿದಳು.
ಕೆಳಗೆ ಬಿದ್ದ ಯುವತಿಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿದ್ದವರು ಕೂಡಲೇ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


