ಬಿಗಿ ಭದ್ರತೆಯಲ್ಲಿ ಗುಜರಾತ್: ರಾಜನಾಥ್ ಸಿಂಗ್ ನೇತೃತ್ವದಲ್ಲಿ ಇಂದು ಸಭೆ
ಪಾಕಿಸ್ತಾನದಿಂದ ಗಡಿಯೊಳಗೆ ನುಸುಳಿ 10 ಮಂದಿ ಉಗ್ರಗಾಮಿಗಳು ಗುಜರಾತ್ ರಾಜ್ಯವನ್ನು ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ಇಲಾಖೆಯ...

ನವದೆಹಲಿ: ಪಾಕಿಸ್ತಾನದಿಂದ ಗಡಿಯೊಳಗೆ ನುಸುಳಿ 10 ಮಂದಿ ಉಗ್ರಗಾಮಿಗಳು ಗುಜರಾತ್ ರಾಜ್ಯವನ್ನು ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ಇಲಾಖೆಯ ಸಂದೇಶ ರವಾನೆ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಬಿಗಿ ಕಟ್ಟೆಚ್ಚರ ವಹಿಸಿರುವ ಕುರಿತು ಸಮಾಲೋಚನೆ ನಡೆಸಲು ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡೆಯಲಿದೆ.
ಗೃಹ ಇಲಾಖೆಯ ಅಧಿಕಾರಿಗಳು, ಗುಪ್ತಚರ ಇಲಾಖೆ ಮತ್ತು ಸಂಶೋಧನೆ ಮತ್ತು ವಿಶ್ಲೇಷಣಾ ಅಂಗ(RAW)ದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಗುಜರಾತ್ ರಾಜ್ಯದಲ್ಲಿ ನಾಲ್ಕು ರಾಷ್ಟ್ರೀಯ ಭದ್ರತಾ ಪಡೆಯ ತಂಡಗಳನ್ನು ನಿಯೋಜಿಸಲಾಗಿದ್ದು, ಅವುಗಳಲ್ಲಿ ಮೂರು ತಂಡಗಳನ್ನು ಅಹಮದಾಬಾದ್ ಗೆ ಕಳುಹಿಸಲಾಗಿದೆ. ಇನ್ನೊಂದು ತಂಡವನ್ನು ಸೋಮನಾಥ ದೇವಾಲಯದ ಸುತ್ತಮುತ್ತ ನಿಯೋಜಿಸಲಾಗಿದೆ. ಅಲ್ಲಿ ಇಂದು ಶಿವರಾತ್ರಿ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಾಗಿ ಸೇರುವ ಸಾಧ್ಯತೆಯಿದೆ.
'' ಉಗ್ರಗಾಮಿಗಳು ಗುಜರಾತ್ ರಾಜ್ಯದೊಳಗೆ ನುಸುಳಿದ್ದಾರೆ ಎಂಬ ಸುದ್ದಿ ನಮಗೆ ನಿನ್ನೆ ಸಿಕ್ಕಿತು. ಕೂಡಲೇ ರಾಜ್ಯಾದ್ಯಂತ ಉನ್ನತ ಮಟ್ಟದ ಭದ್ರತೆ ವಹಿಸಲಾಗಿದೆ. ನಿನ್ನೆಯಿಂದ ಸತತ ಕಾರ್ಯಾಚರಣೆಯಲ್ಲಿ ಪೊಲೀಸರ ಮತ್ತು ಭದ್ರತಾ ಪಡೆ ತಂಡ ತೊಡಗಿದ್ದು, ಅನೇಕ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ವಿವಿಧ ಚಟುವಟಿಕೆಗಳಲ್ಲಿ ತೊಡಗಿರುವ ಶಂಕಿತರನ್ನು ನಾವು ಹುಡುಕುತ್ತಿದ್ದೇವೆ ಮತ್ತು ಎಲ್ಲಾ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಗುಜರಾತ್ ಪೊಲೀಸ್ ಮಹಾ ನಿರ್ದೇಶಕ ಪಿಸಿ ಠಾಕುರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉಗ್ರರ ಸಂಭಾವ್ಯ ದಾಳಿಯ ಎಚ್ಚರಿಕೆ ಗುಜರಾತ್ ರಾಜ್ಯಕ್ಕೆ ಬರುತ್ತಿರುವುದು ಇದು ಎರಡನೇ ಸಲ. ಗುಜರಾತ್ ನ ಗಡಿ ಭಾಗ ಮತ್ತು ಸಮುದ್ರ ತೀರ ಪಾಕಿಸ್ತಾನದೊಂದಿಗೆ ಹಂಚಿಕೆಯಾಗಿದೆ.
ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಸೀರ್ ಖಾನ್ ಜಂಜುವಾ, ಭಾರತದ ಸಲಹೆಗಾರ ಅಜಿತ್ ದೋವಲ್ ಅವರಿಗೆ ಮಾಹಿತಿ ನೀಡಿ, ಲಷ್ಕರ್-ಎ-ತೈಬಾ ಮತ್ತು ಜೈಶ್-ಇ-ಮೊಹಮ್ಮದ್ ಸಂಘಟನೆಯ ಗುಂಪು ಗುಜರಾತ್ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


