ಅಮೆರಿಕದಲ್ಲಿದ್ದ ಭಾರತದ ಹಣ ಪತ್ತೆ ಮಾಡಿದ ಮನೋಹರ್ ಪರಿಕ್ಕರ್
ಅಮೆರಿಕದಲ್ಲಿ ಪೆಂಟಗನ್ ನಲ್ಲಿ ಬಳಕೆಯಾಗದೆ ಉಳಿದಿದ್ದ ಭಾರತದ ಹಣವನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪತ್ತೆ ಮಾಡಿದ್ದಾರೆ.

ನವದೆಹಲಿ: ಅಮೆರಿಕದಲ್ಲಿ ಪೆಂಟಗನ್ ನಲ್ಲಿ ಬಳಕೆಯಾಗದೆ ಉಳಿದಿದ್ದ ಭಾರತದ ಹಣವನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪತ್ತೆ ಮಾಡಿದ್ದಾರೆ.
ಯುಎಸ್ ನ ಸೇನಾ ಮಾರಾಟ(ಎಫ್ ಎಂಎಸ್) ಯೋಜನೆಯಲ್ಲಿ ಭಾರತ ಸರ್ಕಾರ 3 ಬಿಲಿಯನ್ ಡಾಲರ್ (20096 ಕೋಟಿ ರೂಪಾಯಿ) ಗಳನ್ನು ಇರಿಸಿತ್ತು. ಆದರೆ ಸರಿಯಾದ ನಿರ್ವಹಣೆ ಇಲ್ಲದ ಅಥವಾ ಅದರ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲವಾದ ಕಾರಣ ಪೆಂಟಗನ್ ನಲ್ಲಿರುವ ಖಾತೆಯಲ್ಲಿ ಭಾರತದ 3 ಬಿಲಿಯನ್ ಡಾಲರ್ ಹಣ ಹಾಗೆಯೇ ಉಳಿದಿತ್ತು. ಅಷ್ಟೇ ಅಲ್ಲದೇ ಈ ಹಣಕ್ಕೆ ಬಡ್ಡಿಯೂ ಬರುತ್ತಿರಲಿಲ್ಲ ಎಂದು ಸ್ವತಃ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಅಮೆರಿಕದಲ್ಲಿ ಉಳಿದಿದ್ದ ಹಣವನ್ನು 2015 -16 ರಲ್ಲಿ ರಕ್ಷಣಾ ವೆಚ್ಚಕ್ಕೆ ಬಳಸಿಕೊಳ್ಳಲಾಗಿದ್ದು, ಎಫ್ಎಂ ಎಸ್ ನ ಖಾತೆಯಲ್ಲಿ ಲ್ಲಿರುವ ಮೊತ್ತ 1.7-1.8 ಬಿಲಿಯನ್ ಡಾಲರ್ನಷ್ಟಾಗಿದೆ ಎಂದು ಪರಿಕ್ಕರ್ ತಿಳಿಸಿದ್ದಾರೆ. ಪೆಂಟಗನ್ ಖಾತೆಯಲ್ಲಿರುವ ಹಣವನ್ನು ಬಳಕೆ ಮಾಡಿಕೊಂಡಿರುವುದರಿಂದ ಬಜೆಟ್ನಲ್ಲಿ ನೀಡಿರುವ ಹಣ ಉಳಿತಾಯ ಸಾಧ್ಯವಾಗಲಿದೆ ಎಂದಿದ್ದಾರೆ ಪರಿಕ್ಕರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


