ದೇಶ

ಚುನಾವಣೆಗೆ ಸಂಬಂಧಪಟ್ಟ ದೂರುಗಳಿವೇ? ವಾಟ್ಸಾಪ್ ನಂಬರಿಗೆ ಕರೆ ಮಾಡಿ

ನಮ್ಮ ದೇಶದ ಒಟ್ಟು ಮತದಾರರಲ್ಲಿ ಕಾಲು ಭಾಗ ಯುವಕ-ಯುವತಿಯರಿದ್ದಾರೆ. ಅವರು ಇಂದಿನ...

ಚುನಾವಣೆಗೆ ಸಂಬಂಧಪಟ್ಟ ದೂರುಗಳಿವೇ? ವಾಟ್ಸಾಪ್ ನಂಬರಿಗೆ ಕರೆ ಮಾಡಿ
ಸಾಂದರ್ಭಿಕ ಚಿತ್ರ
Published On :

ಚೆನ್ನೈ: ನಮ್ಮ ದೇಶದ ಒಟ್ಟು ಮತದಾರರಲ್ಲಿ ಕಾಲು ಭಾಗ ಯುವಕ-ಯುವತಿಯರಿದ್ದಾರೆ. ಅವರು ಇಂದಿನ ತಂತ್ರಜ್ಞಾನಕ್ಕೆ ವೇಗವಾಗಿ ಹೊಂದಿಕೊಂಡು ಹೋಗುತ್ತಾರೆ. ಹಾಗಿರುವಾಗ ಚುನಾವಣೆ ಸಮಯದಲ್ಲಿ ಯುವ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗ ವಾಟ್ಸಾಪ್ ಮೊರೆ ಹೋಗಿದೆ. ವಾಟ್ಸಾಪ್ ನಂಬರ್ ನೀಡಿ ಅದಕ್ಕೆ ಕರೆ ಮಾಡಿದರೆ ಸಾಕು ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುತ್ತದೆ.

ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ತಮಿಳುನಾಡಿನ ಮುಖ್ಯ ಚುನಾವಣಾಧಿಕಾರಿ ರಾಜೇಶ್ ಲಕ್ಹೊನಿ, ವಾಟ್ಸಾಪ್ ಮೂಲಕ ಫೋಟೋ ಮತ್ತು ವಿಡಿಯೋ ಸಾಕ್ಷಿಗಳ ಜೊತೆ ದೂರು ದಾಖಲಿಸಬಹುದು. ವಾಟ್ಸಾಪ್ ಸಂಖ್ಯೆ 9444123456 ಆಗಿದ್ದು, ಈ ಹಿಂದೆ ಎಸ್ ಎಂಎಸ್ ಮೂಲಕ ದೂರು ನೀಡಲು ಈ ಸಂಖ್ಯೆಯನ್ನು ನೀಡಲಾಗಿತ್ತು.

ನಾಳೆಯಿಂದ ಈ ಸಂಖ್ಯೆ ಕಾರ್ಯನಿರ್ವಹಿಸುತ್ತದೆ. ತಮಿಳುನಾಡು ರಾಜ್ಯದಲ್ಲಿ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಏನೇ ಸಮಸ್ಯೆ, ದೂರುಗಳಿದ್ದರೂ ಮತದಾರರು ಈ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬಹುದು. ಇನ್ನು ಎಲ್ಲಾ 32 ಜಿಲ್ಲೆಗಳಿಗೆ ಸಂಬಂಧಪಟ್ಟ ದೂರುಗಳನ್ನು ನೀಡಲು ಪ್ರತ್ಯೇಕ ಸಂಖ್ಯೆ ನೀಡಲಾಗುವುದು ಎಂದು ಹೇಳಿದರು.

ತಮಿಳುನಾಡಿನ ಜನತೆ ತಮ್ಮ ಅಹವಾಲುಗಳನ್ನು ಟೋಲ್ ಫ್ರೀ ಸಂಖ್ಯೆ 1950ಕ್ಕೆ ಕರೆ ಮಾಡಿ ಮತ್ತು ಎಸ್ ಎಂಎಸ್ ಕಳುಹಿಸಿ ದಾಖಲಿಸಬಹುದು. ಅಲ್ಲದೆ ವೆಬ್ ಸೈಟ್ ವಿಳಾಸ www.elections.tn.gov.in ನಲ್ಲಿಯೂ ದಾಖಲಿಸಬಹುದು. ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿರುವ ಸಾರ್ವಜನಿಕ ಸಂಪರ್ಕಾಧಿಕಾರಿ ದೂರುಗಳನ್ನು ನೋಡಿಕೊಳ್ಳುತ್ತಾರೆ. ವಾಟ್ಸಾಪ್ ಗೆ ಕಳುಹಿಸಿದ ದೂರುಗಳನ್ನು ನೋಡಿಕೊಳ್ಳಲು ವಿಶೇಷ ಸಾಫ್ಟ್ ವೇರ್ ವೊಂದು ಇರುತ್ತದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.