ದೇಶ

ಆಗಸದಲ್ಲಿ 17 ಗಂಟೆ ವಿಮಾನ ಚಲಾಯಿಸಲಿರುವ ಮಹಿಳಾ ಕ್ಯಾಪ್ಟನ್ ಗಳು!

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಇತಿಹಾಸ...

ಆಗಸದಲ್ಲಿ 17 ಗಂಟೆ ವಿಮಾನ ಚಲಾಯಿಸಲಿರುವ ಮಹಿಳಾ ಕ್ಯಾಪ್ಟನ್ ಗಳು!
ಕ್ಯಾಪ್ಟನ್ ಕ್ಷಮ್ತ ಬಾಜಪೇಯಿ, ಶುಭಾಂಗಿ ಸಿಂಗ್, ಮೊದಲ ಶ್ರೇಣಿಯ ಅಧಿಕಾರಿಗಳಾದ ರಮ್ಯ ಕೀರ್ತಿ ಗುಪ್ತ ಮತ್ತು ಅಮ್ರಿತ್ ನಾಮ್ದಾರಿ.
Published On :

ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಇತಿಹಾಸ ಸೃಷ್ಟಿಸಲು ಹೊರಟಿದೆ. ಮಹಿಳಾ ಪೈಲಟ್ ಗಳು ಇಂದು ದೆಹಲಿಯಿಂದ ಸಾನ್ ಫ್ರಾನ್ಸಿಸ್ಕೋಗೆ ಪ್ರಯಾಣ ಬೆಳೆಸಲಿದ್ದು ಇದರಲ್ಲಿ ಮಹಿಳಾ ಸಿಬ್ಬಂದಿ ಮಾತ್ರ ಇರುತ್ತಾರೆ.

17 ಗಂಟೆಯ ನಿರಂತರ ಪಯಣದಲ್ಲಿ ಒಬ್ಬರೇ ಒಬ್ಬರು ಪುರುಷ ಸಿಬ್ಬಂದಿಯಿರುವುದಿಲ್ಲ. ತಂತ್ರಜ್ಞ ಕ್ಯಾಬಿನ್ ಸಿಬ್ಬಂದಿಯಿಂದ ಹಿಡಿದು ಚೆಕ್-ಇನ್ ಸಿಬ್ಬಂದಿ, ವೈದ್ಯರು, ಗ್ರಾಹಕ ರಕ್ಷಣೆ ಸಿಬ್ಬಂದಿ, ಎಟಿಸಿ, ಎಂಜಿನಿಯರ್ ಮತ್ತು ಫ್ಲೈಟ್ ರವಾನೆದಾರರು ಹೀಗೆ ಎಲ್ಲಾ ಕೆಲಸಗಳನ್ನೂ ಮಹಿಳಾ ಸಿಬ್ಬಂದಿಯೇ ನಿರ್ವಹಿಸುತ್ತಾರೆ.

ಈ ವಿಮಾನವನ್ನು ಮಹಿಳಾ ಕ್ಯಾಪ್ಟನ್ ಗಳಾದ ಕ್ಷಮ್ತ ಬಾಜಪೇಯಿ, ಶುಭಾಂಗಿ ಸಿಂಗ್, ಮೊದಲ ಶ್ರೇಣಿಯ ಅಧಿಕಾರಿಗಳಾದ ರಮ್ಯ ಕೀರ್ತಿ ಗುಪ್ತ ಮತ್ತು ಅಮ್ರಿತ್ ನಾಮ್ದಾರಿಯವರು ಚಲಾವಣೆ ಮಾಡಲಿದ್ದಾರೆ.

ಮಹಿಳಾ ಸಿಬ್ಬಂದಿ ಮಾತ್ರ ಸುದೀರ್ಘ ಅವಧಿಯವರೆಗೆ ವಿಮಾನವನ್ನು ಚಲಾಯಿಸಲಿದ್ದು, ಇದೊಂದು ಇತಿಹಾಸವನ್ನು ಸೃಷ್ಟಿಸಲಿದೆ. ವಿಮಾನಯಾನ ಸಂಸ್ಥೆಯಲ್ಲಿ ಮಹಿಳೆಯರಿಗೆ ತುಂಬಾ ಗೌರವ ನೀಡಲಾಗುತ್ತದೆ. ಇದೊಂದು ಮಹಿಳಾ ಸಶಕ್ತೀಕರಣಕ್ಕೆ ಪ್ರೇರಣೆಯಾಗಲಿದೆ ಎಂದು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕಿ ಅಶ್ವಿನಿ ಲೊಹನಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.