ದೇಶ

ಕನ್ಹಯ್ಯ ನಾಲಗೆ ಕತ್ತರಿಸಿದವರಿಗೆ ರು. 5 ಲಕ್ಷ ಬಹುಮಾನ: ಯುವ ಮೋರ್ಚಾ ಮುಖಂಡ ಘೋಷಣೆ

ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್‌ನ ನಾಲಗೆ ಕತ್ತರಿಸಿದವರಿಗೆ...

ಕನ್ಹಯ್ಯ ನಾಲಗೆ ಕತ್ತರಿಸಿದವರಿಗೆ ರು. 5 ಲಕ್ಷ ಬಹುಮಾನ: ಯುವ ಮೋರ್ಚಾ ಮುಖಂಡ ಘೋಷಣೆ
ಕನಯ್ಯಾ ಕುಮಾರ್‌
Published On :
ಬದಾವೂ (ಉತ್ತರಪ್ರದೇಶ): ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್‌ನ ನಾಲಗೆ ಕತ್ತರಿಸಿದವರಿಗೆ ರು. 5 ಲಕ್ಷ ಬಹುಮಾನವಾಗಿ ನೀಡುತ್ತೇನೆ ಎಂದು ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ನಾಯಕ ಘೋಷಿಸಿದ್ದಾರೆ.
ಬದಾವೂ ಜಿಲ್ಲೆಯ ಬಿಜೆವೈಎಂ ಜಿಲ್ಲಾ ಅಧ್ಯಕ್ಷ ಕುಲ್‌ದೀಪ್ ವರ್ಶ್ನೆ ಎಂಬಾತ ಇದೀಗ ಈ ರೀತಿ ಘೋಷಣೆ ಮಾಡಿದ್ದಾರೆ. 
ದೇಶದ್ರೋಹದ ಆರೋಪದಲ್ಲಿ ಫೆ. 12ರಂದು ಕನ್ಹಯ್ಯ ಅವರನ್ನು ಬಂಧಿಸಲಾಗಿತ್ತು. ಮಾರ್ಚ್ 3ಕ್ಕೆ ದೆಹಲಿ ಹೈಕೋರ್ಟ್ ಆತನಿಗೆ ಷರತ್ತುಬದ್ಧ ಜಾಮೀನು ನೀಡಿ ಮಾರ್ಚ್ 3 ಕ್ಕೆ ಬಿಡುಗಡೆ ಮಾಡಿತ್ತು. 
ದೇಶದ್ರೋಹಿ ಘೋಷಣೆಗಳನ್ನು ಕೂಗಿದ ನಂತರ ಕನ್ಹಯ್ಯ ಈಗ ಎಲ್ಲರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ವರ್ಶ್ನೆ ಅವರ ಆರೋಪ.
ವರ್ಶ್ನೆ  ಉಚ್ಛಾಟನೆ:  ಈ ರೀತಿ ಬಹುಮಾನ ಘೋಷಿಸಿ ವಿವಾದ ಸೃಷ್ಟಿಸಿದ ವರ್ಶ್ನೆ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ವಜಾ ಮಾಡಲಾಗಿದೆ ಎಂದು ಬಲ್ಲಮೂಲಗಳು ಹೇಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.