ಮಾರ್ಚ್ 2017ರೊಳಗೆ 1.29 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳ ಗಣಕೀಕರಣ
ಆಧುನಿಕರಣದ ಭಾಗವಾಗಿ ಅಂಚೆ ಇಲಾಖೆ ಮಾರ್ಚ್ 2017ರ ವೇಳೆಗೆ ದೇಶಾದ್ಯಂತ ಗ್ರಾಮೀಣ ಭಾಗದ 129, 323 ಅಂಚೆ ಕಚೇರಿಗಳನ್ನು...

Published On :
ನವದೆಹಲಿ: ಆಧುನಿಕರಣದ ಭಾಗವಾಗಿ ಅಂಚೆ ಇಲಾಖೆ ಮಾರ್ಚ್ 2017ರ ವೇಳೆಗೆ ದೇಶಾದ್ಯಂತ ಗ್ರಾಮೀಣ ಭಾಗದ 129, 323 ಅಂಚೆ ಕಚೇರಿಗಳನ್ನು ಗಣಕೀಕರಣಗೊಳಿಸುವುದಾಗಿ ಶುಕ್ರವಾರ ಸಂಸತ್ತಿಗೆ ತಿಳಿಸಿದೆ.
ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ಆಧುನಿಕರಣ ಯೋಜನೆಗೆ ಅಂಗೀಕಾರ ನೀಡಿದ್ದು, 155,000 ಅಂಚೆ ಕಚೇರಿಗಳ ಗಣಕೀಕರಣಕ್ಕೆ ಹಾಗೂ ಸಂಪರ್ಕ ಜಾಲಕ್ಕಾಗಿ 4,909 ಕೋಟಿ ರುಪಾಯಿ ನೀಡಿದೆ ಎಂದು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ರಾಜ್ಯಸಭೆಯಲ್ಲಿ ಲಿಖಿತ ಹೇಳಿಕೆ ನೀಡಿದರು.
ಈ ಆಧುನಿಕರಣ ಯೋಜನೆ ಎಲ್ಲಾ ಅಂಚೆ ಮೇಲ್, ಖಾತೆ ಹಾಗೂ ಆಡಳಿತವನ್ನು ಗಣಕೀಕರಣ ಮತ್ತು ಸಂಪರ್ಕ ಜಾಲವನ್ನು ಕಲ್ಪಿಸಲಿದೆ ಎಂದು ಅವರು ತಿಳಿಸಿದರು. ಅಲ್ಲದೆ ಈ ಯೋಜನೆ ಎಟಿಎಂ, ಕಾಲ್ ಸೆಂಟರ್ , ಉದ್ಯೋಗಿಗಳ ಸಹಾಯವಾಣಿ ಹಾಗೂ ಸಿಎಂಎಸ್ ವ್ಯವಸ್ಥೆಯನ್ನು ಒದಗಿಸಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


