ದೇಶ

ರಕ್ತದ ಮಡುವಿನಲ್ಲಿದ್ದ ನನ್ನ ಮಗಳನ್ನು ಕಾಪಾಡಲು ಯಾರೂ ಯತ್ನಿಸಲಿಲ್ಲ: ಸ್ವಾತಿ ತಂದೆ

ಇದೊಂದು ಹೃದಯ ವಿದ್ರಾವಕ ಘಟನೆ. ರಕ್ತ ಮಡುವಿನಲ್ಲಿದ್ದ ತನ್ನ ಮಗಳನ್ನು ರಕ್ಷಿಸಲು ಯಾರೂ ಯತ್ನಿಸಲಿಲ್ಲ ಎಂದು ಹಾಡುಹಗಲೇ ಚೆನ್ನೈ ರೇಲ್ವೆ...

ರಕ್ತದ ಮಡುವಿನಲ್ಲಿದ್ದ ನನ್ನ ಮಗಳನ್ನು ಕಾಪಾಡಲು ಯಾರೂ ಯತ್ನಿಸಲಿಲ್ಲ: ಸ್ವಾತಿ ತಂದೆ
ಸ್ವಾತಿ
Published On :
ಚೆನ್ನೈ: ಇದೊಂದು ಹೃದಯ ವಿದ್ರಾವಕ ಘಟನೆ. ರಕ್ತ ಮಡುವಿನಲ್ಲಿದ್ದ ತನ್ನ ಮಗಳನ್ನು ರಕ್ಷಿಸಲು ಯಾರೂ ಯತ್ನಿಸಲಿಲ್ಲ ಎಂದು ಹಾಡುಹಗಲೇ ಚೆನ್ನೈ ರೇಲ್ವೆ ಪ್ಲಾಟ್ ಪಾರ್ಮ್ ನಲ್ಲಿ ಕೊಲೆಯಾದ 24 ವರ್ಷದ ಇನ್ಫೋಸಿಸ್ ಉದ್ಯೋಗಿ ಸ್ವಾತಿಯ ತಂದೆ ಹೇಳಿದ್ದಾರೆ.
'ಮುಖ ಪ್ರೇಕ್ಷಕರಾದ ಸಾರ್ವಜನಿಕರು ನನ್ನ ಮಗಳನ್ನು ಮತ್ತೆ ನೋಡದಂತೆ ಮಾಡಿದರು' ಎಂದು ಸ್ವಾತಿ ತಂದೆ ಸಂತನ್ ಗೋಪಾಲ್ ಕೃಷ್ಣ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಳೆದ ಶುಕ್ರವಾರ ದುಷ್ಕರ್ಮಿಯೊಬ್ಬ ಸಾರ್ವಜನಿಕರೆದುರೇ ಸ್ವಾತಿಯನ್ನು ಕೊಚ್ಚಿ ಕೊಲೆ ಮಾಡಿದ್ದ. ಈ ವೇಳೆ ಸಾರ್ವಜನಿಕರಾರು ಸ್ವಾತಿಯ ರಕ್ಷಣೆಗೆ ಬರಲಿಲ್ಲ ಎಂದು ಸಂತನ್ ಗೋಪಾಲ್ ಕೃಷ್ಣ ಅವರು ಆರೋಪಿಸಿದ್ದಾರೆ.
ನನ್ನ ಮಗಳು ಸ್ವಾತಿ ತುಂಬಾ ಮೃದು ಸ್ವಭಾವದವಳಾಗಿದ್ದಳು ಮತ್ತು ಆಕೆ ತನ್ನ ಅಂಗಾಂಗಳನ್ನು ದಾನ ಮಾಡಲು ಬಯಸಿದ್ದಳು ಎಂದು ಸಂತನ್ ಗೋಪಾಲ್ ಕೃಷ್ಣ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.