ದೇಶ

ಮುಸ್ಲಿಮರನ್ನು ಓಲೈಸಲು ಆರ್ ಎಸ್ ಎಸ್ ಪ್ರಯತ್ನ: ಶಿವಸೇನೆ ಆರೋಪ

ಹಿಂದೂ ರಾಷ್ಟ್ರದ ತತ್ವ ಸಿದ್ಧಾಂತಗಳ ಮೇಲೆ ಸ್ಥಾಪಿತವಾಗಿರುವ ಆರ್ ಎಸ್ ಎಸ್ ಮುಸ್ಲಿಮರಿಗೆ ಇಪ್ತಾರ್ ಕೂಟ ಏರ್ಪಡಿಸಲು ಮುಂದಾಗಿರುವುದು ಆಶ್ಟರ್ಯ

ಮುಸ್ಲಿಮರನ್ನು ಓಲೈಸಲು ಆರ್ ಎಸ್ ಎಸ್ ಪ್ರಯತ್ನ: ಶಿವಸೇನೆ ಆರೋಪ
ಮನಿಷಾ ಕಯಾಂಡೆ
Published On :

ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮುಸ್ಲಿಮರ ಓಲೈಕೆಗೆ ಮುಂದಾಗಿದೆ ಎಂದು ಶಿವಸೇನಾ ಕಿಡಿ ಕಾರಿದೆ. ಹಿಂದೂ ರಾಷ್ಟ್ರದ ತತ್ವ ಸಿದ್ಧಾಂತಗಳ ಮೇಲೆ ಸ್ಥಾಪಿತವಾಗಿರುವ ಆರ್ ಎಸ್ ಎಸ್ ಮುಸ್ಲಿಮರಿಗೆ ಇಪ್ತಾರ್ ಕೂಟ ಏರ್ಪಡಿಸಲು ಮುಂದಾಗಿರುವುದು ಆಶ್ಟರ್ಯ ತಂದಿದೆ ಎಂದು ಅದು ಹೇಳಿದೆ.

ಆರ್ ಎಸ್ ಎಸ್  ತನ್ನ ಇತಿಹಾಸ ಮತ್ತು ಪ್ರಮುಖ ಧ್ಯೇಯಗಳನ್ನು ಮರೆತು ಇದೀಗ ಇಫ್ತಾರ್​ಕೂಟ ಏರ್ಪಡಿಸಲು ಮುಂದಾಗಿ ರುವುದು ದುರಂತ ಎಂದು ಶಿವನೇನಾ ಮುಖ್ಯಸ್ಥೆ ಮನಿಷಾ ಕಯಾಂಡೆ ಆರೋಪಿಸಿದ್ದಾರೆ.

ಕಾಂಗ್ರೆಸ್ ಮತ್ತಿತರ ಪಕ್ಷಗಳು ಇಫ್ತಾರ್​ಕೂಟ ಏರ್ಪಡಿಸಿದಾಗ ಅದರ ವಿರುದ್ಧ ದನಿ ಎತ್ತಿ, ಹಿಂದು ರಾಷ್ಟ್ರವಾದಿಗಳಾಗಿದ್ದ ಆರ್​ಎಸ್​ಎಸ್ ಮುಖಂಡರು ಮುಸ್ಲಿಮರನ್ನು ಓಲೈಸಲು ನಿಲುವನ್ನು ಏಕೆ ಕೈಗೊಂಡರೊ ತಿಳಿಯದಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಲ ವಿಚಾರಧಾರೆಗಳಿಂದ ಆರ್​ಎಸ್​ಎಸ್ ಹೊರ ಬಂದಿದೆ. ಹಲವು ವರ್ಷದಿಂದ ಪಾಳಿಸಿಕೊಂಡು ಬಂದಿದ್ದ ಸಿದ್ಧಾಂತದ ಬಗ್ಗೆ ಅನುಯಾಯಿಗಳಿಗೆ ಅನುಮಾನ ಹುಟ್ಟುವಂತೆ ಮಾಡಿದೆ ಎಂದು ಹೇಳಿದ್ದಾರೆ.

ಮುಸ್ಲಿಂ ರಾಷ್ಟ್ರೀಯ ಮಂಚ್ ಸಂಸತ್ ಆವರಣದಲ್ಲಿ 140 ದೇಶಗಳ ರಾಯಭಾರಿಗಳನ್ನು ಆಹ್ವಾನಿಸಿ ಇಫ್ತಾರ್ ಕೂಟ ಏರ್ಪಡಿಸಿದ್ದನ್ನು ಸೇನಾ ತೀವ್ರವಾಗಿ ಖಂಡಿಸುತ್ತದೆ ಎಂದವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.