ದೇಶ

ವರದಕ್ಷಿಣೆ ನೀಡದ ಪತ್ನಿ ಮೇಲೆ ಪತಿ, ಮೈದುನರಿಂದ ಅತ್ಯಾಚಾರ: ತನಿಖೆಗೆ ಮನೆಕಾ ಆದೇಶ

ವರದಕ್ಷಿಣೆ ಹಣಕ್ಕಾಗಿ ತನ್ನ ಪತ್ನಿ ಮೇಲೆ ಪತಿ ಹಾಗೂ ಆತನ ಇಬ್ಬರು ಸೋದರರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದ...

ವರದಕ್ಷಿಣೆ ನೀಡದ ಪತ್ನಿ ಮೇಲೆ ಪತಿ, ಮೈದುನರಿಂದ ಅತ್ಯಾಚಾರ: ತನಿಖೆಗೆ ಮನೆಕಾ ಆದೇಶ
ಮಹಿಳೆಯ ಕೈ ಮೇಲೆ ಟ್ಯಾಟೋ
Published On :
ಜೈಪುರ: ವರದಕ್ಷಿಣೆ ಹಣಕ್ಕಾಗಿ ತನ್ನ ಪತ್ನಿ ಮೇಲೆ ಪತಿ ಹಾಗೂ ಆತನ ಇಬ್ಬರು ಸೋದರರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದ ಅಲ್ವಾರ್ ಎನ್ನುವಲ್ಲಿ ನಡೆದಿದ್ದು, ಅತ್ಯಾಚಾರವೆಸಗಿರುವ ವ್ಯಕ್ತಿಗಳು ಮಹಿಳೆಯ ದೇಹದ ಆರೇಳು ಕಡೆಗಳಲ್ಲಿ ವಿಚಿತ್ರ ಸ್ವರೂಪದ ಟ್ಯಾಟೋ ಹಾಕಿ ವಿಕೃತ ಸಂತೋಷ ಅನುಭವಿಸಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಇದೀಗ 30 ವರ್ಷದ ಮಹಿಳೆ ತನ್ನ ಮೇಲಿನ ದೌರ್ಜನ್ಯದ ವಿರುದ್ಧ ದೂರು ದಾಖಲಿಸಿದ್ದು, ಅತ್ಯಾಚಾರ ನಡೆಸಿ ದೇಹದ ಮೇಲೆ ಅಶ್ಲೀಲ ಬರಹ, ಚಿತ್ರಗಳ ಟ್ಯಾಟೋ ಹಾಕಿ ‘ನನ್ನ ತಂದೆ ಮೋಸಗಾರ’ಎಂದು ಬರೆದು ವಿಲಕ್ಷಣವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾಳೆ.
ಪೊಲೀಸರ ಪ್ರಕಾರ, ಮಹಿಳೆಗೆ 2014ರಲ್ಲಿ ಅಲ್ವಾರ್​ನ ರೆನಿ ಹಳ್ಳಿಗೆ ಮದುವೆ ಮಾಡಿಕೊಡಲಾಗಿದೆ. ಅಂದಿನಿಂದಲೂ ಆಕೆಯ ಪತಿ ಜಗನ್ನಾಥ್ ಎಂಬಾತ ಹಾಗೂ ಆತನ ಇಬ್ಬರು ಸೋದರರು 51,000 ವರದಕ್ಷಿಣೆ ಕೊಡುವಂತೆ ಪೀಡಿಸುತ್ತಲೇ ಇದ್ದರು. ಆದರೆ ಅದನ್ನು ನೀಡುವ ಪರಿಸ್ಥಿತಿ ಪೋಷಕರಲ್ಲಿ ಇಲ್ಲದ ಕಾರಣ ಕಷ್ಟವನ್ನೆಲ್ಲಾ ಸಹಿಸಿಕೊಂಡು ಬರರುತ್ತಿದ್ದಳು. ಅಂತಿಮವಾಗಿ ಆಕೆಯ ಮೇಲೆ ಪತಿ ಸೇರಿ ಆತನ ಇಬ್ಬರು ಸೋದರರು ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಆಕೆಯ ದೇಹದ ಮೇಲೆ ವಿಲಕ್ಷಣವಾದ ಟ್ಯಾಟೋಗಳನ್ನು ಹಾಕಲಾಗಿದೆ. ಇದರಿಂದಾಗಿ 30 ವರ್ಷದ ಮಹಿಳೆ ಸಾಕಷ್ಟು ನೊಂದಿದ್ದಾಳೆ. ಈಗಾಗಲೇ ಕೋರ್ಟ್​ನಲ್ಲಿಯೂ ಪ್ರಕರಣ ದಾಖಲಾಗಿದೆ, 
ಇನ್ನು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೆಕಾ ಗಾಂಧಿ ಅವರು, ಘಟನೆಯ ಕುರಿತು ತನಿಖೆ ನಡೆಸುವಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.