ತೃತೀಯಲಿಂಗಿಗಳ ವಿವಾಹದ ಪರ ಫತ್ವಾ ಹೊರಡಿಸಿದ ಮೌಲ್ವಿಗಳು
ತೃತೀಯಲಿಂಗಿಗಳು ಪಾಕಿಸ್ತಾನದಲ್ಲಿ ಕಾನೂನಾತ್ಮಕವಾಗಿ ವಿವಾಹವಾಗಬಹುದೆಂದು ಪಾಕಿಸ್ತಾನದ 50 ಕ್ಕೂ ಹೆಚ್ಚು ಧಾರ್ಮಿಕ ಸಂಸ್ಥೆಗಳು ಸೋಮವಾರ ಫತ್ವಾವೊಂದನ್ನು...

ಇಸ್ಲಾಮಾಬಾದ್: ತೃತೀಯಲಿಂಗಿಗಳು ಪಾಕಿಸ್ತಾನದಲ್ಲಿ ಕಾನೂನಾತ್ಮಕವಾಗಿ ವಿವಾಹವಾಗಬಹುದೆಂದು ಪಾಕಿಸ್ತಾನದ 50 ಕ್ಕೂ ಹೆಚ್ಚು ಧಾರ್ಮಿಕ ಸಂಸ್ಥೆಗಳು ಸೋಮವಾರ ಫತ್ವಾವೊಂದನ್ನು ಹೊರಡಿಸಿವೆ.
ಈ ಕುರಿತಂತೆ ಡಾನ್ ಆನ್ ಲೈನ್ ಮಾಧ್ಯಮವೊಂದು ವರದಿ ಮಾಡಿದೆ. ತಾನ್ಜೀಮ್ ಇತ್ತೇಹಾದ್-ಇ-ಉಮ್ಮತ್ ನ ಮೌಲ್ವಿಗಳು ಫತ್ವಾವೊಂದನ್ನು ಹೊರಡಿಸಿದ್ದು, ಬಾಹ್ಯ ರೂಪದಲ್ಲಿ ಪುರುಷರಂತೆ ಕಾಣಿಸುವವರು ಮಹಿಳೆಯರನ್ನು ಅಥವಾ ಬಾಹ್ಯರೂಪದಲ್ಲಿ ಮಹಿಳೆಯರಂತೆ ಕಾಣಿಸುವವರು ಪುರುಷರನ್ನು (ತೃತೀಯ ಲಿಂಗಿಗಳು) ವಿವಾಹವಾಗಬಹುದು ಆದರೆ, ಪುರುಷ ಹಾಗೂ ಮಹಿಳೆ ಇಬ್ಬರಂತೆ ವರ್ತಿಸುವವರು ಯಾವುದೇ ವಿವಾಹವಾಗುವಂತಿಲ್ಲ ಎಂದು ಹೇಳಿದೆ.
ಇದೇ ವೇಳೆ ತೃತೀಯ ಲಿಂಗಿಗಳ ಆಸ್ತಿಯನ್ನು ಕಿತ್ತುಕೊಳ್ಳುವುದು ಕಾನೂನುಬಾಹಿರ ಎಂದು ಹೇಳಿರುವ ಮೌಲ್ವಿಗಳು, ತೃತೀಯ ಲಿಂಗಿಗಳ ಮಗ/ಮಗಳ ಪಿತ್ರಾರ್ಜಿತ ಆಸ್ತಿಯನ್ನು ಕಿತ್ತುಕೊಳ್ಳುವ ಪೋಷಕರು ದೇವರ ಕ್ರೋಧಕ್ಕೆ ಒಳಗಾಗುತ್ತಾರೆ. ಅಂತಹ ಪೋಷಕರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಿದೆ.
ತೃತೀಯ ಲಿಂಗಿಗಳ ಕುರಿತು ಸಮಾಜ ವಿವಿಧ ರೀತಿಯಲ್ಲಿ ವರ್ತಿಸುತ್ತಿದೆ. ತೃತೀಯಲಿಂಗಿಗಳನ್ನು ಅವಮಾನ, ಲೇವಡಿ ಹಾಗೂ ಅಪಮಾನ ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ಇನ್ನು ತೃತೀಯ ಲಿಂಗಿಗಳು ಸಾವನ್ನಪ್ಪಿದರೆ ಅವರಿಗೆ ಮುಸ್ಲಿಂ ಪುರುಷ ಹಾಗೂ ಮಹಿಳೆಯರಿಗೆ ನಡೆಸುವ ರೀತಿಯಲ್ಲೇ ಅಂತಿಮ ಸಂಸ್ಕಾರ ನಡೆಸಬೇಕೆಂದು ಫತ್ವಾ ಹೊರಡಿಸಿದ್ದಾರೆಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


