ಭಾರತೀಯ ಯೋಧರ ಸಾವಿಗಿಂತ ಇಫ್ತಾರ್ ಕೂಟವೇ ಹೆಚ್ಚಾಯ್ತೆ?
ಅತ್ತ ಪ್ಯಾಂಪೋರ್ ನಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿಗಲು ಭಾರತೀಯ ಯೋಧರನ್ನು ಹತ್ಯೆಗೈದಿದ್ದರೆ, ಇತ್ತ ಆ ದೇಶದ ರಾಯಭಾರಿ ಅಬ್ದುಲ್ ಬಸಿತ್ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದಷ್ಟೇ ಅಲ್ಲದೇ ಯೋಧರ ಕುರಿತು ನಿರ್ಲಕ್ಷ್ಯವಾಗಿ ಮಾತನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ..

ನವದೆಹಲಿ: ಅತ್ತ ಪ್ಯಾಂಪೋರ್ ನಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿಗಲು ಭಾರತೀಯ ಯೋಧರನ್ನು ಹತ್ಯೆಗೈದಿದ್ದರೆ, ಇತ್ತ ಆ ದೇಶದ ರಾಯಭಾರಿ ಅಬ್ದುಲ್ ಬಸಿತ್ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದಷ್ಟೇ ಅಲ್ಲದೇ ಯೋಧರ ಕುರಿತು ನಿರ್ಲಕ್ಷ್ಯವಾಗಿ ಮಾತನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ನಿನ್ನೆ ಕಾಶ್ಮೀರದ ಪುಲ್ವಾಮಾ ಗ್ರಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ ಸಂಬಂಧ ಮಾಧ್ಯಮಗಳು ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್ ರನ್ನು ಸಂಪರ್ಕಿಸಿದಾಗ ನಿರ್ಲಕ್ಷ್ಯದ ಉತ್ತರ ನೀಡಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. "ಇದು ರಂಜಾನ್ ಮಾಸವಾಗಿದ್ದು, ಇಫ್ತಾರ್ ಕೂಟದತ್ತ ನಾವು ಗಮನ ಹರಿಸಿದ್ದೇವೆ. ಕಾಶ್ಮೀರ ವಿಷಯ ಉಭಯ ದೇಶಗಳ ನಡುವಿನ ಬಿಕ್ಕಟ್ಟಾಗಿದ್ದು, ಎರಡೂ ದೇಶಗಳ ಪರಸ್ಪರ ಮಾತುಕತೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿದೆ. ಹೀಗಾಗಿ ಪ್ರಸ್ತುತ ನಾವು ಇಫ್ತಾರ್ ಕೂಟದ ಸಂಭ್ರಮ ಆಚರಿಸೋಣ ಎಂದು ನಿರ್ಲಕ್ಷ್ಯವಾಗಿ ಹೇಳಿದ್ದಾರೆ.
ಅಬ್ದುಲ್ ಬಾಸಿತ್ ರ ಈ ಹೇಳಿಕೆ ಇದೀಗ ವಿವಾದದ ಸ್ವರೂಪ ಪಡೆದಿದ್ದು, ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.
ಇನ್ನು ಕಾಶ್ಮೀರ ಉಗ್ರ ದಾಳಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಹುತಾತ್ಮ ಯೋಧರಿಗೆ ಕಂಬಿನಿ ಮಿಡಿದರು. ಅಂತೆಯೇ ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಕೂಡ ಹುತಾತ್ಮ ಯೋಧರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ದಾಳಿ ನಡೆಸಿದ ಉಗ್ರರ ಹತ್ಯೆ
ಇನ್ನು ಭಾರತೀಯ ಯೋಧರೆ ಮೇಲೆ ದಾಳಿ ನಡೆಸಿದ ಉಗ್ರರನ್ನು ಬೆನ್ನುಹತ್ತಿದ್ದ ಯೋಧರ ಪಡೆ ಅವರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಸೇನಾಮೂಲಗಳು ತಿಳಿಸಿವೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಿಆರ್ ಪಿಎಫ್ ಐಜಿ ನಳಿನ್ ಪ್ರಭಾತ್ ಅವರು, ದಾಳಿ ಕೋರ ಉಗ್ರರನ್ನು ಸದೆಬಡಿಯಲಾಗಿದ್ದು, ಅವರಿಂದ 2 ಎಕೆ 47 ಬಂದೂಕುಗಳು, 11 ಗ್ರೆನೇಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಉಗ್ರರ ಮೂಲ ಪತ್ತೆ ಮಾಡಲು ತಜ್ಞರಿಂದ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


