ಫೇಸ್‌ಬುಕ್ ಪ್ರೇಯಸಿಗೆ ವಂಚನೆ: ಮದುವೆಗೂ ಮುನ್ನ ದಿನ ಐಎಫ್ಎಸ್ ಅಧಿಕಾರಿ ವಿರುದ್ಧ ರೇಪ್ ಕೇಸ್
ಫೇಸ್ ಬುಕ್ ಪ್ರೇಯಸಿಗೆ ಮದುವೆಯಾಗುವುದಾಗಿ ಹೇಳಿ ವಂಚಿಸಿದ್ದ ತಮಿಳುನಾಡು ಅರಣ್ಯಾಧಿಕಾರಿ ಜಿ ಸತ್ಯಮೂರ್ತಿ ವಿರುದ್ಧ ನೊಂದ ಯುವತಿ ವಡಪಲನಿ ಮಹಿಳಾ ಪೊಲೀಸ್...

Published On :
ಚೆನ್ನೈ: ಫೇಸ್ ಬುಕ್ ಪ್ರೇಯಸಿಗೆ ಮದುವೆಯಾಗುವುದಾಗಿ ಹೇಳಿ ವಂಚಿಸಿದ್ದ ತಮಿಳುನಾಡು ಅರಣ್ಯಾಧಿಕಾರಿ ಜಿ ಸತ್ಯಮೂರ್ತಿ ವಿರುದ್ಧ ನೊಂದ ಯುವತಿ ವಡಪಲನಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
2015ರ ಜನವರಿಯಲ್ಲಿ ಪುದುಚೇರಿಯ ಮುಲ್ಲೈಯಗಮ್ ಅರಣ್ಯ ವಲಯದಲ್ಲಿ ಕೆಲಸ ಮಾಡುತ್ತಿದ್ದ ವೇಳೆ 25ರ ಹರೆಯದ ಯುವತಿಗೆ ಜಿ ಸತ್ಯಮೂರ್ತಿ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದು, ಪರಿಚಯ ಮುಂದೆ ಪ್ರೀತಿಗೆ ಕಾರಣವಾಗಿದೆ. ಮದುವೆಯಾಗುವುದಾಗಿ ಹೇಳಿ ಸತ್ಯಮೂರ್ತಿ ತನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಯುವತಿ ದೂರು ನೀಡಿದ್ದಾಳೆ.
ಮದುವೆಯಾಗುವುದಾಗಿ ಹೇಳಿ ತನ್ನೊಂದಿಗೆ ಸತ್ಯಮೂರ್ತಿ ಸಂಬಂಧ ಬೆಳಸಿದ್ದರು. ಮದುವೆಯಾಗುವುದಾಗಿ ಹೇಳಿದ್ದರಿಂದ ಸತ್ಯಮೂರ್ತಿಗೆ 5 ಲಕ್ಷ ರುಪಾಯಿ ಕೊಟ್ಟಿದ್ದೆ. ಕಳೆದ ಫೆಬ್ರವರಿಯಲ್ಲಿ ವದಪಲನಿಯ ಹೊಟೇಲ್ ವೊಂದರಲ್ಲಿ ಭೇಟಿಯಾದ ಬಳಿಕ ನಮ್ಮಿಬ್ಬರ ನಡುವಿನ ಸಂಬಂಧ ಹಲಸಿತ್ತು. ಬಳಿಕ ಸತ್ಯಮೂರ್ತಿ ಫೋನ್ ನಲ್ಲಿ ನಾವಿಬ್ಬರು ಜತೆಯಾಗಿ ತೆಗೆಸಿಕೊಂಡಿದ್ದ ಫೋಟೋಗಳನ್ನು ಡಿಲೀಟ್ ಮಾಡುವಂತೆ ಹೇಳಿದ್ದರು. ಅಲ್ಲದೆ ನಾನು ಕೊಟ್ಟಿದ್ದ 5 ಲಕ್ಷ ಕೊಡಲ್ಲ ಎಂದು ಹೇಳಿದ್ದ ಎಂದು ಯುವತಿ ಆರೋಪಿಸಿದ್ದಾಳೆ.
ಯುವತಿಯ ದೂರಿನನ್ವಯ ಸತ್ಯಮೂರ್ತಿ ವಿರುದ್ಧ ಐಪಿಸಿ ಸೆಕ್ಷನ್ 376, 417, 506(1)ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


