ದೇಶ

ಪ್ಯಾಂಪೋರ್ ಉಗ್ರ ದಾಳಿ; 8ಕ್ಕೇರಿದ ಹುತಾತ್ಮ ಯೋಧರ ಸಂಖ್ಯೆ, 22 ಮಂದಿ ಗಂಭೀರ

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಪುಲ್ವಾಮದ ಪ್ಯಾಂಪೋರ್ ನಲ್ಲಿರುವ ಸಿಆರ್ ಪಿಎಫ್ ಮೀಸಲು ಪಡೆ ವಾಹನಗಳ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ಯೋಧರ ಸಂಖ್ಯೆ 8ಕ್ಕೇರಿದೆ.

ಪ್ಯಾಂಪೋರ್ ಉಗ್ರ ದಾಳಿ; 8ಕ್ಕೇರಿದ ಹುತಾತ್ಮ ಯೋಧರ ಸಂಖ್ಯೆ, 22 ಮಂದಿ ಗಂಭೀರ
ಯೋಧರ ಮೇಲೆ ಗುಂಡಿನ ದಾಳಿ (ಸಂಗ್ರಹಚಿತ್ರ)
Published On :

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಪುಲ್ವಾಮದ ಪ್ಯಾಂಪೋರ್ ನಲ್ಲಿರುವ ಸಿಆರ್ ಪಿಎಫ್ ಮೀಸಲು ಪಡೆ ವಾಹನಗಳ ಮೇಲೆ ನಡೆದ ಉಗ್ರರ  ದಾಳಿಯಲ್ಲಿ ಸಾವನ್ನಪ್ಪಿದ ಯೋಧರ ಸಂಖ್ಯೆ 8ಕ್ಕೇರಿದೆ.

ಪ್ಯಾಂಪೋರ್ ನಲ್ಲಿ ಸಿಆರ್ ಪಿಎಫ್ ನ ಭದ್ರತಾ ಸಿಬ್ಬಂದಿಗಳು ವಾಹನಗಳಲ್ಲಿ ವಾಹನದ ಮೇಲೆ ನಿನ್ನೆ ಸ೦ಜೆ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಫಿದಾಯಿನ್ ಉಗ್ರರು ನಡೆಸಿದ  ಗು೦ಡಿನ ದಾಳಿಯಲ್ಲಿ ಕೇ೦ದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‍ಪಿಎಫ್) 8 ಯೋಧರು ಹುತಾತ್ಮರಾಗಿದ್ದಾರೆ. ಭದ್ರತಾ ಸಿಬ್ಬ೦ದಿ ನಡೆಸಿದ ಪ್ರತಿದಾಳಿಗೆ ಇಬ್ಬರು ಉಗ್ರರು ಮೃತ ಪಟ್ಟಿದ್ದಾರೆ.  ಅಂತೆಯೇ ಗು೦ಡಿನ ಚಕಮಕಿಯಲ್ಲಿ 22 ಪೊಲೀಸ್ ಸಿಬ್ಬ೦ದಿ ಗಾಯಗೊ೦ಡಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗ೦ಭೀರವಾಗಿದೆ.

ಹೇಗಾಯ್ತು ದಾಳಿ?
ಯೋಧರು ಶೂಟಿ೦ಗ್ ತರಬೇತಿ ಮುಗಿಸಿ ಶ್ರೀನಗರದ ಶಿಬಿರಕ್ಕೆ ಹಿ೦ದಿರುಗುತ್ತಿದ್ದಾಗ ಈ ದಾಳಿ ನಡೆದಿದ್ದು, ಕಾರಿನಲ್ಲಿ ಬ೦ದ ಉಗ್ರರು ಏಕಾಏಕಿ ಭದ್ರತಾ ವಾಹನಗಳ ಮೇಲೆ ಗುಂಡಿನ ದಾಳಿ  ನಡೆಸಿದ್ದಾರೆ. ಈ ವೇಳೆ ಹಲವು ಸೈನಿಕರಿಗೆ ಗುಂಡೇಟು ತಗುಲಿದ್ದು, ಇತರೆ ಸೈನಿಕರು ಪ್ರತಿದಾಳಿ ನಡೆಸಿದ್ದಾರೆ. ಸೈನಿಕರ ಪ್ರತಿದಾಳಿ ಆರ೦ಭವಾಗುತ್ತಿದ್ದ೦ತೆಯೇ ಉಗ್ರರು ಕಾರಿನಲ್ಲಿ ಪರಾರಿಯಾಗಿದ್ದು, ಅವರ ಪತ್ತೆಗಾಗಿ ಭದ್ರತಾ ಪಡೆ ಕಾಯಾ೯ಚರಣೆ ಆರ೦ಭಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.