ದೇಶ

ಅನಂತನಾಗ್ ಉಪಚುನಾವಣೆ: ಮೆಹಬೂಬಾ ಮುಫ್ತಿಗೆ ಭರ್ಜರಿ ಜಯ

ಮಾಜಿ ಸಿಎಂ ಮುಫ್ತಿ ಮೊಹಮದ್ ಸಾವಿನಿಂದಾಗಿ ತೆರವಾಗಿದ್ದ ಅನಂತನಾಗ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೆಹಬೂಬಾ ಮುಫ್ತಿ ಭರ್ಜರಿ ಜಯ ದಾಖಲಿಸಿದ್ದಾರೆ...

ಅನಂತನಾಗ್ ಉಪಚುನಾವಣೆ: ಮೆಹಬೂಬಾ ಮುಫ್ತಿಗೆ ಭರ್ಜರಿ ಜಯ
ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೆಹಬೂಬಾ (ಸಂಗ್ರಹ ಚಿತ್ರ)
Published On :

ಶ್ರೀನಗರ: ಮಾಜಿ ಸಿಎಂ ಮುಫ್ತಿ ಮೊಹಮದ್ ಸಾವಿನಿಂದಾಗಿ ತೆರವಾಗಿದ್ದ ಅನಂತನಾಗ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೆಹಬೂಬಾ ಮುಫ್ತಿ ಭರ್ಜರಿ ಜಯ ದಾಖಲಿಸಿದ್ದಾರೆ.

ಅನಂತನಾಗ್ ಕ್ಷೇತ್ರದ ಉಪ ಚುನಾವಣೆ ನಿಮಿತ್ತ ಶನಿವಾರ ಬೆಳಗ್ಗೆ ನಡೆದ ಮತ ಎಣಿಕೆ ಕಾರ್ಯದಲ್ಲಿ ಪಿಡಿಪಿ ಪಕ್ಷದ ಅಭ್ಯರ್ಥಿ ಮೆಹಮೂಬಾ ಮುಫ್ತಿ ಅವರು 12 ಸಾವಿರಕ್ಕೂ ಅಧಿಕ ಮತಗಳ  ಮುನ್ನಡೆ ಸಾಧಿಸುವ ವಿಜೇತರಾಗಿದ್ದಾರೆ. 5 ನೇ ಸುತ್ತಿನ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಅವರಿಗೆ ತೀವ್ರ ಸ್ಪರ್ಧೆ ನೀಡಿದ್ದ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಇಫ್ತಿಕಾರ್ ಮಿಸ್​ಗರ್ ಮತ್ತು  ಕಾಂಗ್ರೆಸ್​ನ ಹಿಲಾಲ್ ಷಾ ಅವರು ಹೀನಾಯವಾಗಿ ಪರಾಭವಗೊಂಡಿದ್ದಾರೆ.

ಮೂಲಗಳ ಪ್ರಕಾರ ಮುಫ್ತಿ ಮೆಹಬೂಬಾ 12, 085 ಮತಗಳ ಅಂತರದಿಂದ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಹಿಲಾಲ್ ಶಾ ರನ್ನು ಪರಾಭವಗೊಳಿಸಿದ್ದಾರೆ. ಅನಂತ್ ನಾಗ್ ಕ್ಷೇತ್ರದಲ್ಲಿ  ಒಟ್ಟು 28,500 ಮತಗಳು ಬಿದ್ದಿದ್ದು, ಈ ಪೈಕಿ ಮುಫ್ತಿ ಮೆಹಬೂಬಾ ಅವರು ಒಟ್ಟು 17,701 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ನ ಹಿಲಾಲ್ ಶಾ 5,616 ಮತಗಳು ಮತ್ತು ನ್ಯಾಷನಲ್  ಕಾನ್ಫರೆನ್ಸ್ ನ ಇಫ್ತಿಕಾರ್ ಮಿಸ್​ಗರ್ ಕೇವಲ 2,811 ಮತಗಳನ್ನು ಮಾತ್ರ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಅನಂತನಾಗ್ ಕ್ಷೇತ್ರದ ಸಂಸದರಾಗಿದ್ದ ಮೆಹಬೂಬಾ ತಮ್ಮ ತಂದೆ ಹಾಗು ಅಂದಿನ ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ನಿಧನದ ನಂತರ ರಾಜ್ಯ ರಾಜಕಾರಣಕ್ಕೆ ಪ್ರವೇಶ  ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.