ಅರವಿಂದ ಸುಬ್ರಮಣಿಯನ್ ದೇಶಭಕ್ತ ಎಂದು ಬಿಜೆಪಿ ಭಾವಿಸಿದರೆ ನನ್ನ ಬೇಡಿಕೆ ಅಮಾನತಿನಲ್ಲಿಡುತ್ತೇನೆ: ಸ್ವಾಮಿ
ವಿತ್ತ ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಅರವಿಂದ ಸುಬ್ರಮಣಿಯನ್ ಅವರನ್ನು ದೇಶಭಕ್ತ ಎಂದು ಪರಿಗಣಿಸುವುದಾದರೇ ಅವರನ್ನು ವಜಾಗೊಳಿಸುವ ತಮ್ಮ ಆಗ್ರಹವನ್ನು...

ನವದೆಹಲಿ: ಭಾರತದ ಆರ್ಥಿಕ ವ್ಯವಸ್ಥೆಯ ತೋಳನ್ನೇ ಚಿರುಚುವ ಪ್ರಯತ್ನದ ಹೊರತಾಗಿಯೂ ಬಿಜೆಪಿ ವಿತ್ತ ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಅರವಿಂದ ಸುಬ್ರಮಣಿಯನ್ ಅವರನ್ನು ದೇಶಭಕ್ತ ಎಂದು ಪರಿಗಣಿಸುವುದಾದರೇ ಅವರನ್ನು ವಜಾಗೊಳಿಸುವ ತಮ್ಮ ಆಗ್ರಹವನ್ನು ಅಮಾನತ್ತಿನಲ್ಲಿಡುವುದಾಗಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಸ್ವಾಮಿ ಆಗ್ರಹಕ್ಕೆ ಸಂಬಂಧಿಸಿದಂತೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನೀಡಿರುವ ಹೇಳಿಕೆ ಹಿನ್ನಲೆಯಲ್ಲಿ ಸ್ವಾಮಿ ಇಂದು ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮೊದಲು ಸ್ವಾಮಿ ಅವರ ಆಗ್ರಹಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಸರ್ಕಾರಕ್ಕೆ ಸಿಇಎ ಅವರ ಬಗ್ಗೆ ಪೂರ್ಣ ವಿಶ್ವಾಸ ಇದೆ. ಕಾಲ ಕಾಲಕ್ಕೆ ಅವರು ಸರ್ಕಾರಕ್ಕೆ ನೀಡಿದ ಸಲಹೆಗಳು ಅತ್ಯಂತ ಮೌಲ್ಯಯುತವಾಗಿದ್ದವು ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ, ‘ದೇಶಭಕ್ತನೆಂದು ಪರಿಗಣಿಸಲಾದ ವ್ಯಕ್ತಿ ತಾನು ಕೆಲಸ ಮಾಡುತ್ತಿದ್ದ ವಿದೇಶವೊಂದಕ್ಕೆ ಭಾರತದ ತೋಳು ತಿರುಚಲು ಸಲಹೆ ಮಾಡಿದ್ದನ್ನು ಕ್ಷಮಿಸಬೇಕೆಂದಾಗಿದ್ದಲ್ಲಿ ಮತ್ತು ಎಎಸ್ ರನ್ನು ದೇಶದ ಆಸ್ತಿ ಎಂದು ಪರಿಗಣಿಸುವುದಾರೆ ನಾನು ನನ್ನ ಬೇಡಿಕೆಯನ್ನು ಅಮಾನತುಗೊಳಿಸುತ್ತೇನೆ. ದಾಖಲೆಗಳು ಲಭ್ಯವಾಗುವವರೆಗೆ ಕಾಯುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಸ್ವಾಮಿ, "ಎಎಸ್ (ಅರವಿಂದ ಸುಬ್ರಮಣಿಯನ್) ಅಮೆರಿಕ ಕಾಂಗ್ರೆಸ್ಗೆ (ಹೇಳಿದ್ದು): ಭಾರತದ ಕಂಪೆನಿಗಳು ಮತ್ತು ರಫ್ತುದಾರರ ವಿರುದ್ಧ ಅಮೆರಿಕದ ತಾರತಮ್ಯ ಉಪಕ್ರಮಗಳು ಮುಕ್ತರಾಷ್ಟ್ರವಾಗುವುದಕ್ಕೆ ಭಾರತದ ಮೇಲೆ ಒತ್ತಡ ನಿರ್ಮಿಸಬಲ್ಲವು’ ಎಎಸ್/13/3/13!’ ಎಂದು ಟ್ವೀಟ್ನಲ್ಲಿ ಸಿಇಎ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


