ದೇಶದ ರಾಜಧಾನಿಯಲ್ಲಿ ಹಾಡುಹಗಲೇ ಗುಂಡಿಕ್ಕಿ ವ್ಯಕ್ಯಿಯ ಕೊಲೆ; ಪುತ್ರನಿಗೆ ಗಾಯ
ಗುರುತು ಪತ್ತೆ ಹಚ್ಚದ ವ್ಯಕ್ತಿಗಳು ಸ್ವಿಫ್ ಕಾರಿನಲ್ಲಿ ಬಂದು ಮಂಗಳವಾರ ಬೆಳಗ್ಗೆ ಗುಂಡು ಹಾರಿಸಿದ್ದಕ್ಕೆ 45 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಅವರ ಪುತ್ರನಿಗೆ ಗಾಯಗಳಾಗಿವೆ. ಈ ಘಟನೆಯ ಆಸುಪಾಸಿನಲ್ಲಿದ್ದ ಇತರ

ನವದೆಹಲಿ: ಗುರುತು ಪತ್ತೆ ಹಚ್ಚದ ವ್ಯಕ್ತಿಗಳು ಸ್ವಿಫ್ ಕಾರಿನಲ್ಲಿ ಬಂದು ಮಂಗಳವಾರ ಬೆಳಗ್ಗೆ ಗುಂಡು ಹಾರಿಸಿದ್ದಕ್ಕೆ 45 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಅವರ ಪುತ್ರನಿಗೆ ಗಾಯಗಳಾಗಿವೆ. ಈ ಘಟನೆಯ ಆಸುಪಾಸಿನಲ್ಲಿದ್ದ ಇತರ ಮೂವರಿಗೂ ಗಾಯಗಳಾಗಿವೆ.
"ಭಜನಪುರ ಪ್ರದೇಶದಲ್ಲಿ ಗುರುತು ಪತ್ತೆ ಇಲ್ಲದ ವ್ಯಕ್ತಿಗಳು ಕೈಲಾಶ್ ನಾಥ್ ಎಂಬುವವರನ್ನು ಗುಂಡಿಕ್ಕಿ ಕೊಂಡಿದ್ದಾರೆ" ಎಂದು ಪೊಲೀಸ್ ಉಪ ಕಮಿಷನರ್ ಅಜಿತ್ ಕುಮಾರ್ ಹೇಳಿದ್ದಾರೆ
ಈ ಘಟನೆ ಮಂಗಳವಾರ ಬೆಳಗ್ಗೆ 8:15 ನಡೆದಿದೆ. ಹರ್ಷ ವಿಹಾರ್ ನ ನಿವಾಸಿ ಕೈಲಾಶ್ ನಾಥ್ ತಮ್ಮ 16 ವರ್ಷದ ಪುತ್ರ ರಾಜನ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಗುಂಡೇಟಿಗೆ ಬಲಿಯಾಗಿದ್ದಾರೆ.
ಪುತ್ರ ರಾಜನ್ ಮತ್ತು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಇನ್ನುಳಿದ ಮೂವರನ್ನು ಬನವಾರಿ ಲಾಲ್, ರಾಮ್ ಲಖನ್ ಮತ್ತು ಜಾವೇದ್ ಎಂದು ಗುರುತಿಸಲಾಗಿದೆ.
ಕೊಲೆ ಪ್ರಕರಣ ದಾಖಲಿಸಿಕೊಂಡು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದು ಮೇಲ್ನೋಟಕ್ಕೆ ವೈಯಕ್ತಿಕ ದ್ವೇಷದಿಂದ ನಡೆದಿರಬಹುದಾದ ಕೊಲೆ ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


