ವಾಟರ್ ಟ್ಯಾಂಕರ್ ಹಗರಣ :ಎಸಿಬಿಯಿಂದ ಅರವಿಂದ್ ಕೇಜ್ರಿವಾಲ್ , ಶೀಲಾ ದೀಕ್ಷಿತ್ ವಿರುದ್ಧ ಎಫ್ಐಆರ್
ವಾಟರ್ ಟ್ಯಾಂಕರ್ ಹಗರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಹಾಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್..

ನವದೆಹಲಿ: ವಾಟರ್ ಟ್ಯಾಂಕರ್ ಹಗರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಹಾಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಎಫ್ ಐ ಆರ್ ದಾಖಲಿಸಿದೆ.
ವಾಟರ್ ಟ್ಯಾಂಕರ್ ಹಗರಣದ ವಿಚಾರಣೆಗೆ ಈ ಇಬ್ಬರೂ ಮುಖ್ಯಮಂತ್ರಿಗಳನ್ನು ಒಳಪಡಿಸಲಾಗುವುದು ಎಂದು ಎಸಿಬಿ ಮುಖ್ಯಸ್ಥ ಮುಕೇಶ್ ಮೀನಾ ತಿಳಿಸಿದ್ದಾರೆ.
ವಾಟರ್ ಟ್ಯಾಂಕರ್ ಹಗರಣದ ಬಗ್ಗೆ ಆಪ್ ಸರ್ಕಾರ ತನಿಖಾ ವರದಿಯೊಂದನ್ನು ಸಿದ್ಧಪಡಿಸಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೆ ಸಲ್ಲಿಸಿತ್ತು. ಜಂಗ್ ಅವರು ಆ ವರದಿಯನ್ನು ಎಸಿಬಿಗೆ ಮುಂದಿನ ಕ್ರಮಕೈಗೊಳ್ಳಲು ಒಪ್ಪಿಸಿದ್ದರು.
ಶೀಲಾ ಟ್ಯಾಂಕರ್ ಮಾಡಿದ್ದ ವಾಟರ್ ಟ್ಯಾಂಕರ್ ಗುತ್ತಿಗೆಯನ್ನು ರದ್ದು ಮಾಡಿಲ್ಲದ ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ಧ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು.
ವಾಟರ್ ಟ್ಯಾಂಕರ್ ಹಗರಣ 2012ರಷ್ಟು ಹಳೆಯದಾಗಿದ್ದು ಆಗ ದೆಹಲಿ ಜಲ ಮಂಡಳಿಗೆ ಶೀಲಾ ದೀಕ್ಷಿತ್ ಅಧ್ಯಕ್ಷರಾಗಿದ್ದರು. ಖಾಸಗಿ ಕಂಪೆನಿಗಳಿಗೆ 385 ಸ್ಟೀಲ್ ಟ್ಯಾಂಕರ್‌ಗಳನ್ನು ಪೂರೈಸುವ ಟೆಂಡರ್‌ಗಳನ್ನು ನೀಡಲಾಗಿತ್ತು.
ಕಳೆದ ವರ್ಷ ಜೂನ್ 19ರಂದು ಈ ಹಗರಣದ ಸತ್ಯ ಶೋಧನೆಗಾಗಿ ಆಪ್ ಸರಕಾರ ಸಮಿತಿಯೊಂದನ್ನು ರೂಪಿಸಿತ್ತು. ವಾಟರ್ ಟ್ಯಾಂಕರ್ ಪೂರೈಕೆಯಲ್ಲಿ 400 ಕೋಟಿ ರೂ.ಗಳ ಭ್ರಷ್ಟಾಚಾರವಾಗಿದೆ ಎಂದು ಸತ್ಯಶೋದನ ಸಮಿತಿಯು ಕಳೆದ ವರ್ಷ ಆಗಸ್ಟ್‌ನಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


