ಇಂದಿನಿಂದ ತಮಿಳುನಾಡಿನ 500 ಬಾರ್ ಗಳಿಗೆ ಬೀಗ
ತಮಿಳುನಾಡಿನಲ್ಲಿ ಸರ್ಕಾರಿ ಸ್ವಾಮ್ಯದ 500 ಬಾರ್ ಗಳಿಗೆ ಬೀಗ ಹಾಕಲು ಜಯಲಲಿತಾ ನೇತೃತ್ವದ ಸರ್ಕಾರ ಶನಿವಾರ ಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳು...

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರಿ ಸ್ವಾಮ್ಯದ 500 ಬಾರ್ ಗಳಿಗೆ ಬೀಗ ಹಾಕಲು ಜಯಲಲಿತಾ ನೇತೃತ್ವದ ಸರ್ಕಾರ ಶನಿವಾರ ಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳು 500 ಬಾರ್ ಗಳಿಗೆ ಬೀಗ ಹಾಕಲು ಮುಂದಾಗಿರುವುದಾಗಿ ಭಾನುವಾರ ತಿಳಿದುಬಂದಿದೆ.
ನಿನ್ನೆಯಷ್ಟೇ ಸರ್ಕಾರಿ ಸ್ವಾಮ್ಯದ 500 ಬಾರ್ ಗಳಿಗೆ ಬೀಗ ಹಾಕುವಂತೆ ಜಯಲಲಿತಾ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಇದರಂತೆ ಇಂದು ಬಾರ್ ಗಳಿಗೆ ಬೀಗ ಹಾಕುವ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.
ಚುನಾವಣೆಗೂ ಮುನ್ನ ಜಯಲಲಿತಾ ಅವರು ರಾಜ್ಯ ಸರ್ಕಾರಿ ಸ್ವಾಮ್ಯದ ಬಾರ್ ಗಳನ್ನು ಮುಚ್ಚುವುದಾಗಿ ಭರವಸೆ ನೀಡಿದ್ದರು. ಇದರಂತೆ ಚುನಾವಣೆಯಲ್ಲಿ ಗೆಲವು ಕಂಡ ಬಳಿಕ ರಾಜ್ಯ ಮಾರುಕಟ್ಟೆ ಕಾರ್ಪೋರೇಶನ್ ಕೇಂದ್ರದ ವ್ಯಾಪಾರ ಸಮಯವನ್ನು ಕಡಿಗೊಳಿಸಲು ಕ್ರಮ ಕೈಗೊಂಡಿದ್ದರು.
ನೀಡಿದ ಭರವಸೆಯಂತೆಯೇ ಒಂದೊಂದನ್ನೇ ಈಡೇರಿಸುತ್ತಿರುವ ಜಯಲಲಿತಾ ಅವರು ಇದೀಗ ಸರ್ಕಾರಿ ಸ್ವಾಮ್ಯದ 500 ಬಾರ್ ಗಳಿಗೆ ಬೀಗ ಹಾಕಿಸುತ್ತಿದ್ದಾರೆ. ಇನ್ನು ಈಗಾಗಲೇ ರಾಜ್ಯದಲ್ಲಿ ನೂತನ ಬಾರ್ ಗಳ ವೇಳಾಪಟ್ಟಿ ಜಾರಿಗೆ ಬಂದಿದ್ದು, ಮಧ್ಯಾಹ್ನ 12 ರಿಂದ ರಾತ್ರಿ 10 ರವರೆಗೆ ಮಾತ್ರ ಇಲ್ಲಿನ ಬಾರ್ ಗಳು ವ್ಯಾಪಾರ ನಡೆಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


