ದೇಶ

ಮುಸ್ಲಿಮರಂತೆ ರಂಜಾನ್ ಆಚರಿಸುವ ರಾಜಸ್ತಾನ ಹಿಂದೂಗಳು

ರಂಜಾನ್ ಸಂದರ್ಭದಲ್ಲಿ ಮುಸ್ಲಿಮರಂತೆ ಹಿಂದೂಗಳು ಸಹ ಒಂದು ತಿಂಗಳು ಉಪವಾಸ ಮಾಡಿ, ಮಸೀದಿಗೆ ತೆರಳಿ ನಮಾಜ್ ಸಲ್ಲಿಸುವ ಪದ್ಧತಿ ..

ಮುಸ್ಲಿಮರಂತೆ ರಂಜಾನ್ ಆಚರಿಸುವ ರಾಜಸ್ತಾನ ಹಿಂದೂಗಳು
ಸಾಂದರ್ಭಿಕ ಚಿತ್ರ
Published On :

ಜೈಸಲ್ಮೇರ್: ರಂಜಾನ್ ಸಂದರ್ಭದಲ್ಲಿ ಮುಸ್ಲಿಮರಂತೆ ಹಿಂದೂಗಳು ಸಹ ಒಂದು ತಿಂಗಳು ಉಪವಾಸ ಮಾಡಿ, ಮಸೀದಿಗೆ ತೆರಳಿ ನಮಾಜ್ ಸಲ್ಲಿಸುವ ಪದ್ಧತಿ ರಾಜಸ್ತಾನದಲ್ಲಿದೆ.

ರಾಜಸ್ಥಾನದ ಜೈಸಲ್ಮೇರ್ ಹಾಗೂ ಬರ್ಮೇರ್ ಜಿಲ್ಲೆಗಳಲ್ಲಿ ಹಿಂದುಗಳ ಪವಿತ್ರ ಹಬ್ಬವಾದ ದೀಪಾವಳಿ ಸಂದರ್ಭದಲ್ಲಿ ಮುಸ್ಲಿಮರ ಮನೆಗಳಲ್ಲಿ ದೀಪಾಲಂಕಾರ ನೋಡಲು ಸಾಧ್ಯ. ಇಸ್ಲಾಮ್ ಧರ್ಮದ ಪವಿತ್ರ ಆಚರಣೆ ರಂಜಾನ್ ತಿಂಗಳಲ್ಲಿ ಹಿಂದುಗಳು ಭಕ್ತಿಯಿಂದ ರೋಜಾ ಆಚರಿಸುವುದನ್ನು ಕಾಣಬಹುದು.

ರಂಜಾನ್​ನ ರೋಜಾ ಸಂದರ್ಭದಲ್ಲಿ ಹಿಂದುಗಳು ಪ್ರತಿ ನಿತ್ಯ ಐದು ಸಾರಿ ಮಸೀದಿಗೆ ತೆರಳಿ ನಮಾಜ್ ಸಲ್ಲಿಸುತ್ತಾರೆ. ಅಷ್ಟೇ ಅಲ್ಲ ಉಪವಾಸ ಕೂಡ ಆಚರಿಸುತ್ತಾರೆ. ಇನ್ನು ಹಿಂದುಗಳ ದೀಪಾವಳಿ, ಗಣೇಶ ಚತುರ್ಥಿಯಲ್ಲಿ ಮುಸ್ಲಿಮರ ಮನೆಗಳಲ್ಲಿ ಕೂಡ ಸಡಗರ ಕಾಣಬಹುದು.

ಭಾರತ ಹಾಗೂ ಪಾಕಿಸ್ತಾನದ ವಿಭಜನೆ ಕಾಲದಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿರಬಹುದೆಂದು ಗ್ರಾಮಸ್ಥರ ನಂಬಿಕೆ. ಈ ಕುರಿತು ಡಾ. ಮೇಘರಾಮ್ ಗಧಿವರ್ ಅವರು ಪ್ರತಿಕ್ರಿಯಿಸಿ, ಉಭಯ ಧರ್ಮದವರು ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡು ವಿಧಿ ವಿಧಾನಗಳನ್ನು ಅತ್ಯಂತ ಸಂತೋಷದಿಂದ ಆಚರಿಸುತ್ತೇವೆ. ಅಷ್ಟೇ ಅಲ್ಲ ಕಷ್ಟ ಬಂದಾಗ ಕೂಡ ಪರಸ್ಪರ ಕೈ ಜೋಡಿಸಿ ಸಮಸ್ಯೆಗೆ ಪರಿಹಾರಕ್ಕೆ ಕಂಡುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.