ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ: ಬೆಂಬಲಕ್ಕೆ 48 ಸದಸ್ಯ ರಾಷ್ಟ್ರಗಳಿಗೆ ಅಮೆರಿಕ ಒತ್ತಾಯ
ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಚೀನಾ ವಿರೋಧಿಸುತ್ತಿದ್ದರೂ, ಅಮೆರಿಕ ತನ್ನ ಬೆಂಬಲವನ್ನು ಮುಂದುವರೆಸಿದ್ದು, ಭಾರತದ ಸದಸ್ಯತ್ವಕ್ಕೆ ಬೆಂಬಲ ನೀಡುವಂತೆ 48 ಸದಸ್ಯ ರಾಷ್ಟ್ರಗಳಿಗೂ ಕರೆ ನೀಡಿದೆ.

ವಾಷಿಂಗ್ ಟನ್: ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಚೀನಾ ವಿರೋಧಿಸುತ್ತಿದ್ದರೂ, ಅಮೆರಿಕ ತನ್ನ ಬೆಂಬಲವನ್ನು ಮುಂದುವರೆಸಿದ್ದು, ಭಾರತದ ಸದಸ್ಯತ್ವಕ್ಕೆ ಬೆಂಬಲ ನೀಡುವಂತೆ 48 ಸದಸ್ಯ ರಾಷ್ಟ್ರಗಳಿಗೂ ಕರೆ ನೀಡಿದೆ.
ಮುಂದಿನ ವಾರ ನಡೆಯಲಿರುವ ಎನ್ ಎಸ್ ಜಿ ಸರ್ವಸದಸ್ಯರ ಸಭೆಯಲ್ಲಿ ಭಾರತದ ಸದಸ್ಯತ್ವ ವಿಚಾರ ಚರ್ಚೆಗೆ ಬರಲಿದ್ದು, ಭಾರತದ ಅರ್ಜಿಗೆ ಬೆಂಬಲ ನೀಡಬೇಕೆಂದು ಅಮೆರಿಕ ಎಲ್ಲಾ 48 ಸದಸ್ಯ ರಾಷ್ಟ್ರಗಳಿಗೂ ಒತ್ತಾಯಿಸಿದೆ ಎಂದು ಅಮೆರಿಕದ ಸರ್ಕಾರಿ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಗೆ ಭೇಟಿ ನೀಡಿದ್ದಾಗಲೂ ಅಮೆರಿಕ ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸ್ಪಷ್ಟಪಡಿಸಿದ್ದರು. ಇದಕ್ಕೂ ಮುನ್ನ ಭಾರತದ ಸದಸ್ಯತ್ವವನ್ನು ವಿರೋಧಿಸುತ್ತಿರುವ ರಾಷ್ಟ್ರಗಳಿಗೆ ಅಧಿಕೃತ ಪತ್ರವನ್ನು ಬರೆದಿದ್ದ ಅಮೆರಿಕ, ಭಾರತದ ಸೇರ್ಪಡೆಗೆ ಅಡ್ಡಿ ಉಂಟು ಮಾಡುವುದಿಲ್ಲ ಎಂಬ ನಿಬಂಧನೆಗೆ ಒಪ್ಪಿಕೊಳ್ಳಬೇಕೆಂದು ಹೇಳಿತ್ತು.
ಭಾರತದ ಸದಸ್ಯತ್ವವನ್ನು ನಿರಂತರವಾಗಿ ವಿರೋಧಿಸುತ್ತಿರುವ ಚೀನಾ, ಭಾರತ ಅಣ್ವಸ್ತ್ರಗಳ ಪ್ರಸರಣ ನಿಷೇಧದ ಷರತ್ತುಗಳನ್ನು ಅನುಸರಿಸುವುದಾದರೆ ಮಾತ್ರ ಎನ್ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದೆ. ಎನ್ ಪಿಟಿ ಗೆ ಸಹಿ ಹಾಕದ ರಾಷ್ಟ್ರ ವಿಶ್ವಸಂಸ್ಥೆ ಪರಮಾಣು ಪೂರೈಕೆದಾರರ ಸಮೂಹಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ಎನ್ಎಸ್ ಜಿ ಯ ಎಲ್ಲಾ ರಾಷ್ಟ್ರಗಳು ತೀರ್ಮಾನ ಕೈಗೊಂಡು, ಭಾರತ ಅಣ್ವಸ್ತ್ರ ಪ್ರಸರಣ ನಿಷೇಧದ ಷರತ್ತುಗಳನ್ನು ಭಾರತ ಪೂರೈಸಿದರೆ ಚೀನಾ ಭಾರತದ ಸದಸ್ಯತ್ವವನ್ನು ಬೆಂಬಲಿಸಲಿದೆ ಎಂದು ಚೀನಾ ಸ್ಪಷ್ಟಪಡಿಸಿದೆ. ಚೀನಾದ ವಿರೋಧದ ಹೊರತಾಗಿಯೂ ಈಗ ಅಮೆರಿಕ ಭಾರತದ ಸದಸ್ಯತ್ವವನ್ನು ಸಭೆಯಲ್ಲಿ ಸ್ವಾಗತಿಸಬೇಕೆಂದು ಎಲ್ಲಾ 48 ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


