ದೇಶ

ಹೈದರಾಬಾದ್: ಖಡಕ್ ಐಪಿಎಸ್ ಅಧಿಕಾರಿ ಶಶಿಕುಮಾರ್ ನಿಗೂಢ ಸಾವು

ಹೈದರಾಬಾದ್ ನ ವಿಶಾಖಪಟ್ಟಣ ಜಿಲ್ಲೆಯ ಪಡೇರು ವಿಭಾಗದ ಪೊಲೀಸ್‌ ಸೂಪರಿಂಟೆಂಡೆಂಟ್‌ ಕೆ ಶಶಿ ಕುಮಾರ್‌ ಅವರು ತಮ್ಮ ಅಧಿಕೃತ ನಿವಾಸದಲ್ಲಿ ನಿಗೂಢವಾಗಿ ..

ಹೈದರಾಬಾದ್: ಖಡಕ್ ಐಪಿಎಸ್ ಅಧಿಕಾರಿ ಶಶಿಕುಮಾರ್ ನಿಗೂಢ ಸಾವು
ಐಪಿಎಸ್ ಅಧಿಕಾರಿ ಶಶಿಕುಮಾರ್
Published On :

ವಿಶಾಖಪಟ್ಟಣ: ಹೈದರಾಬಾದ್ ನ ವಿಶಾಖಪಟ್ಟಣ ಜಿಲ್ಲೆಯ ಪಡೇರು ವಿಭಾಗದ ಪೊಲೀಸ್‌ ಸೂಪರಿಂಟೆಂಡೆಂಟ್‌ ಕೆ ಶಶಿ ಕುಮಾರ್‌ ಅವರು ತಮ್ಮ ಅಧಿಕೃತ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಬೆಳಗ್ಗೆ ಆರು ಗಂಟೆ ಸಮಯದಲ್ಲಿ ಯಾವಾಗಲೂ ಶಶಿ ಕುಮಾರ್ ತಮ್ಮ ಸರ್ವೀಸ್ ರಿವಾಲ್ವರ್ ಅನ್ನು ಕ್ಲೀನ್ ಮಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು ತಲೆಗೆ ತಾಗಿ ಸಾವನ್ನಪ್ಪಿದ್ದಾರೆ, ಶಶಿಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಬಲಹೀನ ಮನಸ್ಸಿನವರಲ್ಲ ಎಂದು ವಿಶೇಷಾಧಿಕಾರಿ ಅತ್ತಾಡ ಬಾಬೂಜಿ ಹೇಳಿದ್ದಾರೆ.

ಶಶಿ ಕುಮಾರ್‌ ಅವರ ಮನೆಯ ಹೊರಗೆ ಕಾವಲು ನಿಂತಿದ್ದ ಸೆಕ್ಯುರಿಟಿ ಗಾರ್ಡ್‌ಗೆ ಮನೆಯೊಳಗಿನಿಂದ  ಗುಂಡು ಹಾರಾಟದ ಸದ್ದು ಕೇಳಿಬಂದಿದೆ. ಮನೆಯೊಳಗೆ ಧಾವಿಸಿ ಹೋದಾಗ ಅಲ್ಲಿ ಶಶಿಕುಮಾರ್‌ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

ತೀವ್ರವಾಗಿ ಗಾಯಗೊಂಡಿದ್ದ ಶಶಿ ಕುಮಾರ್‌ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯದಲ್ಲೇ ಅವರು ಅಸುನೀಗಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಘಟನೆ ವೇಳೆ ಶಶಿಕುಮಾರ್‌  ತಮ್ಮ ಮನೆಯಲ್ಲಿ ಒಂಟಿಯಾಗಿದ್ದರು. ಮೂಲತಃ ತಮಿಳುನಾಡಿನ ಸೇಲಂ ನವರಾಗಿರುವ ಶಶಿ ಕುಮಾರ್‌ ಅವರು 2012ರ ಐಪಿಎಸ್‌ ಬ್ಯಾಚಿನ ಅಧಿಕಾರಿಯಾಗಿದ್ದಾರೆ. ಅವರನ್ನು 2015ರ ಡಿಸೆಂಬರ್‌ 31ರಂದು ಪಡೇರು ವಿಭಾಗಕ್ಕೆ ನಿಯೋಜಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.