ಕಾಶ್ಮೀರದಲ್ಲಿರುವ ಭವಾನಿ ದೇವಾಲಯಕ್ಕೆ ಭೇಟಿ ನೀಡಿದ ನೂರಾರು ಕಾಶ್ಮೀರಿ ಪಂಡಿತರು
ಮಾತಾ ರಾಜ್ಞ್ಯಾ ದೇವಿಗೆ ವಾರ್ಷಿಕ ಪೂಜೆ ಸಲ್ಲಿಸುವ ಸಂಪ್ರದಾಯ ಹೊಂದಿರುವ ಕಾಶ್ಮೀರಿ ಪಂಡಿತರು, ಜೂ.12 ರಂದು ಕಾಶ್ಮೀರದಲ್ಲಿರುವ ಭವಾನಿ ದೇವಾಲಯಕ್ಕೆ ಭೇಟಿ ನೀಡಿ ರಾಜ್ಞ್ಯಾ ದೇವಿಗೆ ಪೂಜೆ ಸಲ್ಲಿಸಿದ್ದಾರೆ.

ಶ್ರೀನಗರ: ಮಾತಾ ರಾಜ್ಞ್ಯಾ ದೇವಿಗೆ ವಾರ್ಷಿಕ ಪೂಜೆ ಸಲ್ಲಿಸುವ ಸಂಪ್ರದಾಯ ಹೊಂದಿರುವ ಕಾಶ್ಮೀರಿ ಪಂಡಿತರು, ಜೂ.12 ರಂದು ಕಾಶ್ಮೀರದಲ್ಲಿರುವ ಭವಾನಿ ದೇವಾಲಯಕ್ಕೆ ಭೇಟಿ ನೀಡಿ ರಾಜ್ಞ್ಯಾ ದೇವಿಗೆ ಪೂಜೆ ಸಲ್ಲಿಸಿದ್ದಾರೆ.
ಖೀರ್ ಭವಾನಿ ದೇವಾಲಯಕ್ಕೆ ಭೇಟಿ ನೀಡಿದ್ದ ಕಾಶ್ಮೀರಿ ಪಂಡಿತರ ಪೈಕಿ ಹೆಚ್ಚಿನವರು ವಲಸೆ ಹೋಗಿರುವ ಪಂಡಿತರಾಗಿದ್ದು, ರಾಜ್ಞ್ಯಾ ದೇವಿಗೆ ಪೂಜೆ ಸಲ್ಲಿಸಲು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದರು. ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 24 ಕಿಮಿ ದೂರದಲ್ಲಿರುವ ಖೀರ್ ಭವಾನಿ ದೇವಾಲಯದಲ್ಲಿ ಕಾಶ್ಮೀರಿ ಪಂಡಿತರು ಪ್ರತಿ ವರ್ಷವೂ ಪೂಜೆ ಸಲ್ಲಿಸುವ ಪದ್ಧತಿ ಹೊಂದಿದ್ದಾರೆ.
1990 ರಲ್ಲಿ ಕಾಶ್ಮೀರದಲ್ಲಿ ಪಂಡಿತರ ಮೇಲೆ ಇಸ್ಲಾಮಿಕ್ ಮೂಲಭೂತವಾದಿಗಳಿಂದ ದೌರ್ಜನ್ಯ ನಡೆದು ಬಹುತೇಕ ಪಂಡಿತರ ಕುಟುಂಬಗಳು ಹೊರನಡೆದಿದ್ದರು ಇಂದಿಗೂ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ಪದ್ಧತಿ ಚಾಲ್ತಿಯಲ್ಲಿದೆ. ಈ ಬಾರಿ ಸುಮಾರು 13 ,000 ವಲಸೆ ಹೋಗಿರುವ ಕಾಶ್ಮೀರಿ ಪಂಡಿತರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಇನ್ನು ದೇವಾಲಯದ ಪ್ರದೇಶದಲ್ಲಿರುವ ಮುಸ್ಲಿಮರು ಕಾಶ್ಮೀರಿ ಪಂಡಿತರನ್ನು ಸ್ವಾಗತಿಸಿದರು, ದೇವಿ ರಾಜ್ಞ್ಯಾ ದೇವಾಲಯಕ್ಕೆ ಪಂಡಿತರು ಭೇಟಿ ನೀಡುವುದಕ್ಕೂ ಮುನ್ನ ಜಮ್ಮು-ಕಾಶ್ಮೀರ ಸಿಎಂ ಮೆಹಬೂಮಾ ಮುಫ್ತಿ ಸಹ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


