ಚೀನಾ ಸಾಗರದ ಸಮೀಪ ಭಾರತ, ಅಮೆರಿಕ, ಜಪಾನ್ ನೌಕಾದಳ ಕವಾಯತು
ಮಿಲಿಟರಿ ಸಂಬಂಧಗಳನ್ನು ಹೆಚ್ಚಿಸಲು ಮತ್ತು ಬಿಕ್ಕಟ್ಟಿನ ಮಧ್ಯೆ ವ್ಯಾಪಾರ, ವಹಿವಾಟುಗಳನ್ನು ವೃದ್ಧಿಗೊಳಿಸಲು ದಕ್ಷಿಣ ಚೀನಾ ಸಮುದ್ರಕ್ಕೆ...

ನವದೆಹಲಿ: ಮಿಲಿಟರಿ ಸಂಬಂಧಗಳನ್ನು ಹೆಚ್ಚಿಸಲು ಮತ್ತು ಬಿಕ್ಕಟ್ಟಿನ ಮಧ್ಯೆ ವ್ಯಾಪಾರ, ವಹಿವಾಟುಗಳನ್ನು ವೃದ್ಧಿಗೊಳಿಸಲು ಚೀನಾ ಸಾಗರದ ಸಮೀಪ ಭಾರತ, ಅಮೆರಿಕ, ಜಪಾನ್ ಜಂಟಿಯಾಗಿ ನೌಕಾದಳ ಕವಾಯತು ನಡೆಸಲಿವೆ.
ಭಾರತ ನೌಕಾಪಡೆಯ ಹಡಗುಗಳಾದ ಸತ್ಪುರ, ಸಹ್ಯಾದ್ರಿ, ಶಕ್ತಿ ಮತ್ತು ಕಿರ್ಚ್ 20ನೇ ನೌಕಾಪಡೆ ಕಸರತ್ತಿನಲ್ಲಿ ಮೂರೂ ದೇಶಗಳು ಭಾರತದ 'ಆಕ್ಟ್ ಈಸ್ಟ್ ಪಾಲಿಸಿ'ಯಡಿ ಭಾಗವಹಿಸಲಿವೆ.
ಈ ನೌಕಾ ಕಸರತ್ತು ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ನೌಕಾ ಕಡಲ ಭದ್ರತೆಗೆ ಮತ್ತು ಜಾಗತಿಕ ನೌಕಾ ಕಡಲ ತೀರದ ವ್ಯಾಪಾರ ವೃದ್ಧಿಗೆ ನೆರವು ನೀಡಲಿದೆ.
ಇದು ದಕ್ಷಿಣ ಚೀನಾ ಸಮುದ್ರ ತೀರದಲ್ಲಿ ನಡೆಯುತ್ತಿದೆ ಅನ್ನುವುದು ವಿಶೇಷ.
1992ರಿಂದ ಭಾರತ ಮತ್ತು ಅಮೆರಿಕ ನಿಯಮಿತವಾಗಿ ವಾರ್ಷಿಕ ನೌಕಾದಳ ಕವಾಯತು ನಡೆಸುತ್ತಾ ಬಂದಿವೆ. 2007ರಿಂದ ಮಲಬಾರ್ ನೌಕಾ ಕವಾಯತ್ತನ್ನು ಎರಡು ವರ್ಷಗಳಿಗೊಮ್ಮೆ ಭಾರತದ ಕಡಲ ತೀರದಲ್ಲಿ ಮತ್ತು ಪಶ್ಚಿಮ ಫೆಸಿಫಿಕ್ ಭಾಗದಲ್ಲಿ ಮಾಡಿಕೊಂಡು ಬಂದಿದೆ. ಕಳೆದ ವರ್ಷ ಚೆನ್ನೈಯ ಕಡಲ ತೀರದಲ್ಲಿ ನಡೆದ ಪ್ರದರ್ಶನದಲ್ಲಿ ಜಪಾನ್ ಕೂಡ ಭಾಗವಹಿಸಿತ್ತು.
ಮೂರೂ ದೇಶಗಳ ನೌಕಾಪಡೆಯ ವ್ಯಾಪಾರ, ವಹಿವಾಟು ವೃದ್ಧಿಪಡಿಸುವುದು ಮತ್ತು ನೌಕಾಪಡೆ ಭದ್ರತಾ ಕಾರ್ಯಚರಣೆಯಲ್ಲಿ ಮೂರೂ ರಾಷ್ಟ್ರಗಳು ಸಾಮಾನ್ಯ ಹಿತಾಸಕ್ತಿ ಬೆಳೆಸುವುದು ಈ ನೌಕಾಪಡೆ ಕವಾಯತಿನ ಉದ್ದೇಶವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


