ವಿವಾಹಾಕಾಂಕ್ಷಿಗೆ ಹೆಣ್ಣು ತೋರಿಸಿ, ಬ್ಲ್ಯಾಕ್ ಮೇಲ್ ಮಾಡಿ ದೋಚುತ್ತಿದ್ದ ಗ್ಯಾಂಗ್ ಆರೆಸ್ಟ್
2ನೇ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದ ವ್ಯಕ್ತಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಪೊಲೀಸರು...

ಅಹಮದಾಬಾದ್: 2ನೇ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದ ವ್ಯಕ್ತಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ.
ಪರ್‌ಸೊತಮ್ ಮಾರ್ವಿಯಾ ಅವರ ಪತ್ನಿ ಮೂರುವರೆ ವರ್ಷದ ಹಿಂದೆ ತೀರಿಕೊಂಡಿದ್ದರು, ಕುಟುಂಬದವರು ಅವರಿಗೆ ಇತ್ತೀಚೆಗೆ ಮರು ಮದುವೆ ಮಾಡಲು ನಿರ್ಧರಿಸಿದ್ದರು. ವಿಷಯ ತಿಳಿದ ಶೀಲಾ ಕ್ರಿಶ್ಚಿಯನ್ ಎಂಬಾಕೆ ಕರೆ ಮಾಡಿ ಹುಡುಗಿ ತೋರಿಸುವುದಾಗಿ ಅಹಮದಾಬಾದ್‌ಗೆ ಕರೆಸಿದ್ದರು. ಮತ್ತೊಮ್ಮೆ ನಗರಕ್ಕೆ ಕರೆಸಿಕೊಂಡು ಮಂಜುಳಾ ಎಂಬಾಕೆ ಸೇರಿದಂತೆ ಹಲವು ಹುಡುಗಿಯರನ್ನು ತೋರಿಸಿದರು. ಆದರೆ ಪರ್‌ಸೊತಮ್ ಮಾರ್ವಿಯಾ ನಿರಾಕರಿಸಿದ್ದರು.
ಕೆಲವು ದಿನದ ಬಳಿಕ ಮಂಜುಳಾ ಕರೆ ಮಾಡಿ, 'ನಿಮ್ಮನ್ನೇ ಮದುವೆಯಾಗುತ್ತೇನೆ, ನೀವು ಒಪ್ಪದಿದ್ದರೆ ನಿಮ್ಮ ಹೆಸರು ಬರೆದಿಟ್ಟು ಸಾಯುವೆ,' ಎಂದು ಬೆದರಿಸಿದ್ದಳು. ಹೆದರಿದ ಪರ್‌ಸೊತಮ್ ಮಾರ್ವಿಯಾ ಅಹಮದಾಬಾದ್‌ಗೆ ಹೋಗಿ ಆಕೆಯನ್ನು ಭೇಟಿಯಾಗಿದ್ದರು. ಬಳಿಕ ಆಕೆ ಮತ್ತೊಂದು ಹುಡುಗಿಯೊಂದಿಗೆ ಮಾರ್ವಿಯಾ ಜತೆ ಮೌಂಟ್ ಅಬುವಿಗೆ ಹೋದಳು. .ಪರ್‌ಸೊತಮ್ ಮಾರ್ವಿಯಾ ಅವರನ್ನು ಮೌಂಟ್ ಅಬುವಿಗೆ ಕರೆದೊಯ್ದು ಅಲ್ಲಿನ ವಸತಿಗೃಹದಲ್ಲಿ ಮತ್ತು ಬರುವ ಪಾನೀಯ ನೀಡಿ ಅಸಭ್ಯ ಭಂಗಿಗಳಲ್ಲಿ ಪೋಟೊ ತೆಗೆಯಲಾಗಿತ್ತು. ಅವರಲ್ಲಿದ್ದ ಚಿನ್ನಾಭರಣ, ನಗದನ್ನು ದೋಚಲಾಗಿತ್ತು. ನಂತರ ಆ ಪೋಟೊಗಳನ್ನು ಮುಂದಿಟ್ಟು 5 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಲಾಗುತ್ತಿತ್ತು.
ಈ ಬೆನ್ನಲ್ಲೆ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ 25 ಲಕ್ಷ ರೂ. ನೀಡದಿದ್ದರೆ ಅಸಭ್ಯ ಪೋಟೊಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸುತ್ತಿದ್ದ. ಆತನಿಗೆ ಹಣ ನೀಡಲು ಬಂದಾಗ ಮಾರ್ವಿಯಾ ಪುತ್ರ ಅವರನ್ನು ಪ್ರಶ್ನಿಸಿದಾಗ ಎಲ್ಲಾ ವಿವರವನನ್ನು ಮಗನಿಗೆ ನೀಡಿದ್ದಾರೆ, ನಂತರ ಅಪ್ಪ ಮಗ ಇಬ್ಬರು ಸೇರಿ ಪೊಲೀಸರಿಗೆ ದೂರು ನೀಡಿ. ಆತನಿಗೆ 5 ಲಕ್ಷ ರೂ. ನೀಡುವುದಾಗಿ ಹೇಳಿ ಕರೆಸಿದ್ದಾರೆ. ಮಂಜುಳಾ, ಡೈಸಿ, ಶೈಲಾ, ಮೈಕೆಲ್ ಜೊಸೆಫ್ ಎಂಬುವರು ಪೊಲೀಸರು ಬಿಸಿದ ಬಲೆಗೆ ಸಿಕ್ಕಿಬಿದ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


