ಕೂದಲು ಕಸಿ ಮಾಡಿಸಿಕೊಂಡ ಮರುದಿನವೇ ವೈದ್ಯ ವಿದ್ಯಾರ್ಥಿ ಸಾವು
ಕೂದಲು ಕಸಿ ಮಾಡಿಸಿಕೊಂಡಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಕಸಿ ಮಾಡಿಸಿಕೊಂಡ ಮರುದಿನವೇ ಸಾವನ್ನಪ್ಪಿದ್ದಾನೆ....

ಚೆನ್ನೈ: ಕೂದಲು ಕಸಿ ಮಾಡಿಸಿಕೊಂಡಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಕಸಿ ಮಾಡಿಸಿಕೊಂಡ ಮರುದಿನವೇ ಸಾವನ್ನಪ್ಪಿದ್ದಾನೆ. ಸಲೂನ್ ವಿರುದ್ಧ ವೈದ್ಯಕೀಯ ಆಯೋಗ ನೋಟಿಸ್ ಜಾರಿ ಮಾಡಿದೆ.
ವಿದ್ಯಾರ್ಥಿ ಸಂತೋಷ್ 15 ದಿನಗಳ ಹಿಂದೆ ವಿದ್ಯಾರ್ಥಿ ಈ ಚಿಕಿತ್ಸೆಗೆ ಒಳಗಾಗಿದ್ದ. ಚಿಕಿತ್ಸೆ ನೀಡಿದ ಸ್ಥಳ ವೈದ್ಯಕೀಯ ಕೇಂದ್ರವೂ ಅಲ್ಲ. ಬದಲಾಗಿ ಅದೊಂದು ಸಲೂನ್.
ಕೂದಲು ಕಸಿ ಮಾಡುವಾಗ ಕೂದಲು ದಟ್ಟವಾಗಿರುವ ಜಾಗದಿಂದ ಚರ್ಮ ಸಮೇತ ಕೂದಲ ಬೇರನ್ನು ತೆಗೆದು ಕೂದಲಿಲ್ಲದ ಜಾಗದಲ್ಲಿ ಕಸಿ ಮಾಡುತ್ತಾರೆ. ಅದಕ್ಕಾಗಿ ಅರವಳಿಕೆ ಮದ್ದನ್ನು ಉಪಯೋಗಿಸುತ್ತಾರೆ. ಮೇ 17ರಂದು ವಿದ್ಯಾರ್ಥಿಗೆ ಕೂದಲು ಕಸಿ ಮಾಡಲು 10 ಗಂಟೆ ಸಮಯ ತೆಗೆದುಕೊಂಡಿದ್ದಾರೆ.
ಮರುದಿನ ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕುಟುಂಬದವರು ಆತನನ್ನು ವೆಲ್ಲೂರಿನ ಕ್ರಿಸ್ಟಿಯನ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತ ಆಸ್ಪತ್ರೆಗೆ ಬಂದ ಕೆಲ ಕ್ಷಣಗಳಲ್ಲೇ ಬಹು ಅಂಗಾಂಗ ವೈಫಲ್ಯಕ್ಕೊಗಾಗಿ ಮೃತನಾದ ಎಂದು ಆಸ್ಪತ್ರೆ ವರದಿ ನೀಡಿದೆ. ಅವರಿಗೆ ಆನಾಫಲ್ಯಾಕ್ಸಿಸ್ ಎಂಬ ಪ್ರಬಲ ಅಲರ್ಜಿ ಪ್ರಕ್ರಿಯೆಯಿಂದ ಅಂಗಾಗ ವೈಫಲ್ಯವಾಗಿದೆ. ಇದು ಅನಸ್ತೇಷಿಯಾದಿಂದ ಆಗಿರಬಹುದು ಎಂದು ಅಲ್ಲಿಯ ವೈದ್ಯರು ಹೇಳಿದ್ದಾರೆ.
ಕುಟುಂಬದವರು ಆತ ಅನಸ್ತೇಷಿಯ ಪಡೆಯಲು ಕಾರಣವೇನೆಂದು ಪತ್ತೆ ಮಾಡಿದಾಗ ಆತ ಕೂದಲ ಕಸಿ ಮಾಡಿಸಿಕೊಂಡಿದ್ದು ತಿಳಿದು ಬಂದಿದೆ. ಆದರೆ ಕುಟುಂಬದವರು ಪೊಲೀಸ್ ದೂರು ನೀಡಿಲ್ಲದ ಕಾರಣ ಮರಣೋತ್ತರ ಪರೀಕ್ಷೆಯೂ ನಡೆದಿಲ್ಲ.
ಈ ಕುರಿತು ಕ್ರಮ ಕೈಗೊಳ್ಳಲು ಮುಂದಾಗಿರುವ ರಾಜ್ಯ ವೈದ್ಯಕೀಯ ಮಂಡಳಿ ತಾನು ನೀಡಿರುವ ನೋಟಿಸ್‌ನಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಶಸ್ತ್ರಚಿಕಿತ್ಸೆ ನಡೆಸಿದ್ದು ಏಕೆ ಎಂದು ಕೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


