ಹಿರಿಯ ಪತ್ರಕರ್ತ ಕೆ.ಕೆ.ಕತ್ಯಾಲ್ ನಿಧನ
ಹಿಂದೂ ಪತ್ರಿಕೆಯ ದೆಹಲಿ ವಿಭಾಗದ ಮಾಜಿ ಸ್ಥಳೀಯ ಸಂಪಾದಕ, ಹಿರಿಯ ಪತ್ರಕರ್ತ ಕೆ.ಕೆ.ಕತ್ಯಾಲ್ ದೀರ್ಘಕಾಲದ...

ನವದೆಹಲಿ: ಹಿಂದೂ ಪತ್ರಿಕೆಯ ದೆಹಲಿ ವಿಭಾಗದ ಮಾಜಿ ಸ್ಥಳೀಯ ಸಂಪಾದಕ, ಹಿರಿಯ ಪತ್ರಕರ್ತ ಕೆ.ಕೆ.ಕತ್ಯಾಲ್ ದೀರ್ಘಕಾಲದ ಅಸೌಖ್ಯದ ನಂತರ ಬುಧವಾರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಹಿಂದೂ ಪತ್ರಿಕೆಗೆ ಸೇರುವ ಮುನ್ನ ಕತ್ಯಾಲ್ ಸ್ಟೇಟ್ಸ್ ಮ್ಯಾನ್ ಮತ್ತು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ನಿರಂತರ ಪ್ರವಾಸದಲ್ಲಿ ತೊಡಗುತ್ತಾ ಪತ್ರಿಕೋದ್ಯಮದ ಆಳ-ಅಗಲ ಅರಿತಿದ್ದ ಕತ್ಯಾಲ್ ಅವರಿಗೆ ರಾಯಭಾರ ಮತ್ತು ರಾಜಕೀಯ ವಲಯದಲ್ಲಿ ಉತ್ತಮ ಸಂಪರ್ಕವಿತ್ತು. ಅವರಿಗೆ 1994ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಜಿ.ಕೆ.ರೆಡ್ಡಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಿದ್ದರು.
ಇಂದಿನ ಪಾಕಿಸ್ತಾನದಲ್ಲಿರುವ ಜಂಗ್ ಪ್ರದೇಶದಲ್ಲಿ ಹುಟ್ಟಿದವರಾಗಿದ್ದ ಕತ್ಯಾಲ್ 2004ರಲ್ಲಿ ವೃತ್ತಿಯಿಂದ ನಿವೃತ್ತರಾದ ನಂತರ ಭಾರತ-ಪಾಕ್ ಸಂಬಂಧ ವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು.
ಕತ್ಯಾಲ್ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಂಬನಿ ಮಿಡಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


