ದೆಹಲಿ: ಒಂದೇ ಕುಟುಂಬದ ಮೂವರ ಭೀಕರ ಹತ್ಯೆ
ರಾಷ್ಟ್ರ ರಾಜಧಾನಿಯ ದೆಹಲಿಯ ಬ್ರಹ್ಮಪುರಿ ಪ್ರದೇಶದಲ್ಲಿ ತ್ರಿವಳಿ ಕೊಲೆ ನಡೆದಿದ್ದು ನಾಗರಿಕರು ಬೆಚ್ಚಿ ಬೆದ್ದಿದ್ದಾರೆ...

ನವದೆಹಲಿ: ರಾಷ್ಟ್ರ ರಾಜಧಾನಿಯ ದೆಹಲಿಯ ಬ್ರಹ್ಮಪುರಿ ಪ್ರದೇಶದಲ್ಲಿ ತ್ರಿವಳಿ ಕೊಲೆ ನಡೆದಿದ್ದು ನಾಗರಿಕರು ಬೆಚ್ಚಿ ಬೆದ್ದಿದ್ದಾರೆ.
50 ವರ್ಷದ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಅತ್ಯಂತ ಕ್ರೂರವಾಗಿ ಕೊಲ್ಲಲಾಗಿದೆ. ಶನಿವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದ್ದು, ಮೃತರನ್ನು 50 ವರ್ಷದ ಸಾಯಿರಾ ಮತ್ತು ಆಕೆಯ ಮಕ್ಕಳಾದ 19 ವರ್ಷದ ಮೆಹರುನ್ನೀಯಾ ಮತ್ತು 9 ವರ್ಷದ ಶಬನಮ್ ಎಂದು ಗುರುತಿಸಲಾಗಿದೆ.
ಮನೆಯ ಹೊರಗಿನಿಂದ ಲಾಕ್ ಆಗಿದ್ದು ಮನೆಯ ಒಳಗಿನಿಂದ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಗಿಲು ಒಡೆದು ಒಳ ಹೋದ ಪೊಲೀಸರಿಗೆ ಮೂರು ದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮೂವರ ದೇಹದ ತುಂಬ ಗಾಯದ ಗುರುತುಗಳಿದ್ದು, ಹರಿತ ಆಯುಧದಿಂದ ತಾಯಿ ಸಾಯಿರಾ ಕತ್ತು ಸೀಳಿ ಕೊಲೆಗೈಯ್ಯಲಾಗಿದೆ. ಮೆಹರುನ್ನೀಸಾಳನ್ನು ಬೆಡ್ ರೂಮ್‌ನಲ್ಲಿ ಬೀಭತ್ಸವಾಗಿ ಕೊಲೆಗೈದರೆ, ಪುಟ್ಟ ಹುಡುಗಿ ಶಬನಮ್ ದೇಹ ಬಾತ್ ರೂಮ್‌ನಲ್ಲಿ ಕಂಡು ಬಂದಿದೆ. ಸಾಯಿರಾ ದೇಹವನ್ನು ಟೆರೆಸ್ ಕಡೆ ಎಳೆದೊಯ್ಯಲು ಪ್ರಯತ್ನಿಸಿ ಮೆಟ್ಟಿಲುಗಳ ಮೇಲೆ ಬಿಡಲಾಗಿದೆ.
ಮೂರು ದಿನಗಳ ಹಿಂದೆ ಈ ಘಟನೆ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮನೆ ಅವ್ಯವಸ್ಥಿತವಾಗಿದ್ದು ಕೊಲೆಗಾರರು ಮತ್ತು ಸತ್ತವರ ಮಧ್ಯೆ ಮಾರಾ ಮಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಸಾಯಿರಾ ಪತಿ ಮುನ್ನಾ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಆತನಿಗೆ ಎರಡನೆಯ ಪತ್ನಿ ಸಹ ಇದ್ದು ಎರಡು ಕುಟುಂಬಗಳ ಮಧ್ಯೆ ಇದ್ದ ಆಸ್ತಿ ವಿವಾದ ಘಟನೆಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


