ಜಾಟ್ ಪ್ರತಿಭಟನೆ: ಮೊದಲ ದಿನ ಸಂಪೂರ್ಣ ಶಾಂತ
ಮೀಸಲಾತಿಗಾಗಿ ಆಗ್ರಹಿಸಿ ಹರ್ಯಾಣ ರಾಜ್ಯದ ಹಲವು ಕಡೆಗಳಲ್ಲಿ ಜಾಟ್ ಸಮುದಾಯದವರು ಭಾನುವಾರ ಮತ್ತೆ ...

ಚಂಡೀಗಢ: ಮೀಸಲಾತಿಗಾಗಿ ಆಗ್ರಹಿಸಿ ಹರ್ಯಾಣ ರಾಜ್ಯದ ಹಲವು ಕಡೆಗಳಲ್ಲಿ ಜಾಟ್ ಸಮುದಾಯದವರು ಭಾನುವಾರ ಮತ್ತೆ ಪ್ರತಿಭಟನೆ ಮುಂದುವರಿಸಿದ್ದು, ರಸ್ತೆ ಮತ್ತು ರೈಲ್ವೆ ಸಂಚಾರ ಎಂದಿನಂತಿದ್ದವು. ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.
ಪ್ರತಿಭಟನೆ ಶಾಂತಿಯುತವಾಗಿದ್ದು, ಯಾವುದೇ ಅಹಿತಕರ ಘಟನೆ ಇಂದು ನಡೆದ ಬಗ್ಗೆ ವರದಿಯಾಗಿಲ್ಲ ಎಂದು ರಾಜ್ಯ ಗೃಹ ಕಾರ್ಯದರ್ಶಿ ರಾಮ್ ನಿವಾಸ್ ತಿಳಿಸಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಧರಣಿ ಕುಳಿತಿರಲಿಲ್ಲ. ಕೆಲವು ಕಡೆಗಳಲ್ಲಿ ಧರಣಿ ನಡೆದಿದ್ದು, ಸಂಬಂಧಪಟ್ಟ ಉಪ ಆಯುಕ್ತರಿಗೆ ಮನವಿ ಸಲ್ಲಿಸಿ ಧರಣಿ ಮುಂದುವರಿಸಿದರು.ಪ್ರತಿಭಟನಾಕಾರರು ಯಾವುದೇ ಹೆದ್ದಾರಿ, ರೈಲ್ವೆ ಮಾರ್ಗವನ್ನು ತಡೆಯದಿದ್ದರಿಂದ ಟ್ರಾಫಿಕ್ ಸಾಮಾನ್ಯವಾಗಿತ್ತು.
ಕೆಲವರು ಪ್ರತಿಭಟನೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಿಚ್ಚು ಹತ್ತಿಸಲೆತ್ನಿಸಿದಾಗ ಅಂತವರ ವಿರುದ್ಧ ಕೇಸು ದಾಖಲಿಸಲಾಯಿತು. ಹರ್ಯಾಣ ಸರ್ಕಾರ ಮುಷ್ಕರದ ಬಗ್ಗೆ ಸತತ ನಿಗಾ ವಹಿಸಿದ್ದು, ಶಾಂತಿಯನ್ನು ಕದಡಲೆತ್ನಿಸುವವರನ್ನು ಪತ್ತೆಹಚ್ಚಲು ವಿಡಿಯೋ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ರಾಮ್ ನಿವಾಸ್ ಜನತೆಗೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹತೋಟಿಯಲ್ಲಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮೊಹಮ್ಮದ್ ಅಕಿಲ್ ತಿಳಿಸಿದ್ದಾರೆ.
ಜಾಟ್ ಮತ್ತು ಇತರ ಐದು ಸಮುದಾಯಗಳಿಗೆ ಮೀಸಲಾತಿ ನೀಡಿ ಹರ್ಯಾಣ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಾಟ್ ಸಮುದಾಯದವರು ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ. ಒಟ್ಟು 21 ಜಿಲ್ಲೆಗಳಲ್ಲಿ ಕನಿಷ್ಠ 9 ಜಿಲ್ಲೆಗಳಲ್ಲಿ ಇಂದು ತೀವ್ರ ಕಟ್ಟೆಚ್ಚರ ಘೋಷಿಸಲಾಗಿತ್ತು. ಮೀಸಲಾತಿ ನಿಯಮ ಜಾರಿಗೆ ತರಲು ಜಾಟ್ ಸಮುದಾಯ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


