ಭಾರತ ತೆರೆದಿದ್ದ ಸದ್ಭಾವನೆಯ ಕಿಟಿಕಿಯನ್ನು ಪಾಕ್ ಮುಚ್ಚುತ್ತಿದೆ: ಪರಿಕ್ಕರ್
ಭಾರತದ ವಿರುದ್ಧ ತನ್ನ ನೆಲದಿಂದ ಹೊರಹೊಮ್ಮು ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿನ ಪಾಕಿಸ್ಥಾನದ ಪ್ರಾಮಾಣಿಕತೆ ಈಗ ಶಂಕಾಸ್ಪದವಾಗಿದ್ದು,...

Published On :
ನವದೆಹಲಿ: ಭಾರತದ ವಿರುದ್ಧ ತನ್ನ ನೆಲದಿಂದ ಹೊರಹೊಮ್ಮು ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿನ ಪಾಕಿಸ್ಥಾನದ ಪ್ರಾಮಾಣಿಕತೆ ಈಗ ಶಂಕಾಸ್ಪದವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತೆರೆದಿದ್ದ ಸದ್ಭಾವನೆ ಮತ್ತು ಅವಕಾಶಗಳ ಕಿಟಿಕಿಯನ್ನು ಪಾಕ್ ಮುಚ್ಚುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶನಿವಾರ ಹೇಳಿದ್ದಾರೆ.
ಇಂದು ಸಿಂಗಾಪುರದಲ್ಲಿ ಅಂತರ್ ಸರ್ಕಾರಿ ಭದ್ರತಾ ವೇದಿಕೆ ಶಾಂಗ್ರಿಲಾ ಮಾತುಕತೆಯಲ್ಲಿ ರಕ್ಷಣಾ ಸಚಿವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಪಾಕಿಸ್ಥಾನವು ಭಾರತದೊಂದಿಗಿನ ಸದ್ಭಾವನೆ ಮತ್ತು ಅವಕಾಶಗಳ ಕಿಟಿಕಿಯನ್ನು ಮುಚ್ಚುವ ಮುನ್ನ ಭಾರತದೊಂದಿಗಿನ ತನ್ನ ವಿಶ್ವಾಸವನ್ನು ಮತ್ತೆ ಬೆಳೆಸುವ ಪ್ರಯತ್ನ ಮಾಡಬೇಕು ಮತ್ತು ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಯ ತನ್ನ ನಿಲುವಿನಲ್ಲಿ ಪ್ರಾಮಾಣಿಕತೆಯನ್ನು ತೋರಬೇಕು' ಎಂದು ಪರಿಕ್ಕರ್ ಹೇಳಿದ್ದಾರೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಲಾಹೋರ್‌ಗೆ ಅಚ್ಚರಿಯ ಭೇಟಿ ನೀಡಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಅಲ್ಲಿ ಖಾಸಗಿ ನೆಲೆಯಲ್ಲಿ ಭೇಟಿಯಾಗಿ ಕುಶಲೋಪರಿ ನಡೆಸುವ ಮೂಲಕ ಉಭಯ ದೇಶಗಳ ನಡುವಿನ ಬಾಂಧವ್ಯ ಸುಧಾರಣೆಗೆ ಹೊಸ ಭಾಷ್ಯ ಬರೆಯುವ ಯತ್ನ ಮಾಡಿದ್ದರು ಎಂದು ಪರಿಕ್ಕರ್ ಹೇಳಿದರು.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಹದೇವ್ ಅವರು ಮೋದಿಯವರ ಈ ಯತ್ನವನ್ನು ಬೆಂಬಲಿಸಿ ಅಂದು ಟ್ವೀಟ್ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


