ದೆಹಲಿ ಮರ್ಸಿಡಿಸ್ ಹಿಟ್ ಆಂಡ್ ರನ್: ಆರೋಪಿ ವಯಸ್ಕನಂತೆ ವಿಚಾರಣೆಗೆ ಕೋರ್ಟ್ ಅಸ್ತು
ದೆಹಲಿಯ ಮರ್ಸಿಡಿಸ್ ಕಾರು ಹಿಟ್ ಆಂಡ್ ರನ್ ಪ್ರಕರಣದ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸುವುದಕ್ಕೆ...

Published On :
ನವದೆಹಲಿ: ದೆಹಲಿಯ ಮರ್ಸಿಡಿಸ್ ಕಾರು ಹಿಟ್ ಆಂಡ್ ರನ್ ಪ್ರಕರಣದ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸುವುದಕ್ಕೆ ಬಾಲ ನ್ಯಾಯಮಂಡಳಿ ಶನಿವಾರ ಒಪ್ಪಿಗೆ ನೀಡಿದೆ.
ಅಪಘಾತದ ವೇಳೆ ಆರೋಪಿಗೆ 18 ವರ್ಷ ತುಂಬುವುದಕ್ಕೆ ಕೇವಲ ನಾಲ್ಕು ದಿನ ಮಾತ್ರ ಬಾಕಿ ಇತ್ತು. ಹೀಗಾಗಿ ಆರೋಪಿಯನ್ನು ವಯಸ್ಕನಂತೆ ಪರಿಗಣಿಸಿ ವಿಚಾರಣೆಗೆ ಗುರಿಪಡಿಸಲು ಅನುಮತಿ ನೀಡುವಂತೆ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ ಮನವಿಯನ್ನು ಬಾಲ ನ್ಯಾಯ ಮಂಡಳಿಯು ಇಂದು ಪುರಸ್ಕರಿಸಿದೆ.
ಕಳೆದ ಎಪ್ರಿಲ್ 4ರಂದು ಅಪ್ರಾಪ್ತ ಬಾಲಕನೊಬ್ಬ ನುಮರ್ಸಿಡಿಸ್ ವೇಗವಾಗಿ ಚಲಾಯಿಸಿ 32ರ ಹರೆಯದ ಉದ್ಯಮಿ ಸಿದ್ಧಾರ್ಥ ಶರ್ಮಾ ಎಂಬವರ ಮೇಲೆ ಹರಿಸಿ ಅವರ ಸಾವಿಗೆ ಕಾರಣನಾಗಿದ್ದ.
ಮೇ 26ರಂದು ದೆಹಲಿ ಪೊಲೀಸರು ಆರೋಪಿಯ ವಿರುದ್ಧ ಕೊಲೆಯಲ್ಲದ ನರಹತ್ಯೆ ಆರೋಪವನ್ನು ಹೊರಿಸಿ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಜತೆಗೆ ಆರೋಪಿಯ ತಂದೆ ಹಾಗೂ ಕುಟುಂಬದ ವಾಹನ ಚಾಲಕನ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ವಿಚಾರಣೆAdultDelhi Mercedes hit-and-run caseteen to be triedದೆಹಲಿ ಮರ್ಸಿಡಿಸ್ ಹಿಟ್ ಆಂಡ್ ರನ್ವಯಸ್ಕನಂತೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


