ರಾಹುಲ್ ಬಯಸಿದರೇ ಹಿರಿಯ ನಾಯಕರು ಕೆಳಗಿಳಿಯಲು ಸಿದ್ಧ: ಶೀಲಾ ದೀಕ್ಷಿತ್
ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ರಾಗಲು ಇದು ಸೂಕ್ತ ಸಮಯವಾಗಿದ್ದು, ಒಂದು ವೇಳೆ ರಾಹುಲ್ ಯುವನಾಯಕರ ತಂಡ ತಮ್ಮ ಜೊತೆಗಿರಬೇಕೆಂದು ಬಯಸಿದರೇ...

ದೆಹಲಿ: ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ರಾಗಲು ಇದು ಸೂಕ್ತ ಸಮಯವಾಗಿದ್ದು, ಒಂದು ವೇಳೆ ರಾಹುಲ್ ಯುವನಾಯಕರ ತಂಡ ತಮ್ಮ ಜೊತೆಗಿರಬೇಕೆಂದು ಬಯಸಿದರೇ ಹಿರಿಯ ನಾಯಕರು ಅಧಿಕಾರದಿಂದ ಕೆಳಗಿಳಿಯಲು ಸಿದ್ದ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೇಳಿದ್ದಾರೆ.
ಆಂಗ್ಲ ಚಾನೆಲ್ ವೊಂದರ ಸಂದರ್ಶನದಲ್ಲಿ ಮಾತನಾಡಿರುವ ಶೀಲಾ ದೀಕ್ಷಿತ್ ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ತೀರ್ಮಾನ ತೆಗೆದು ಕೊಂಡ ನಂತರ ಅದರ ಅನುಷ್ಠಾನ ಕೂಡ ಅಷ್ಟೇ ಮುಖ್ಯವಾಗಿಗೆ ಎಂದು ಅವರು ಹೇಳಿದ್ದಾರೆ.
ಇನ್ನು ಬಿಹಾರ ವಿಧಾನ ಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಕ್ಕೆ ಉತ್ತರಿಸಿದ ಶೀಲಾ ದೀಕ್ಷಿತ್ ಅದರಲ್ಲಿ ತಪ್ಪೇನು, ಇಲ್ಲ. ರಾಹುಲ್ ಗಾಂಧಿ ತಂತ್ರ ಬಿಹಾರದಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಪಕ್ಷದ ಹಿರಿಯರನ್ನು ಬದಿಗೆ ಸರಿಸಲಾಗುತ್ತಿದ್ದಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶೀಲಾ ದೀಕ್ಷಿತ್, ಯುವ ನಾಯಕರ ತಂಡ ರಾಹುಲ್ ಗಾಂಧಿಗೆ ಬೇಕಿದ್ದರೇ, ಅವರನ್ನು ಆರಿಸಿಕೊಳ್ಳಲಿ, ಇದನ್ನು ಹಿರಿಯ ನಾಯಕರು ಸ್ವಾಗತಿಸಲಿದ್ದಾರೆ ಎಂದು ತಿಳಿಸಿದ್ದಾರೆ. ರಾಹುಲ್ ಗಾಂಧಿ ಅವರ ಐಡಿಯಾಗಳನ್ನು ಕಾರ್ಯರೂಪಕ್ಕೆ ತರುವ ಯುವಕರು ಬೇಕಾಗಿದ್ದಾರೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


