ಉಗ್ರ ವನಿ ಹತ್ಯೆ ನಂತರ ಕಾಶ್ಮೀರದಲ್ಲಿ ಗಲಭೆ, ಪ್ರತಿಭಟನೆ ನಡೆಸಿದ್ದು ನಾನೇ: ಹಫೀಜ್ ಸಯೀದ್

ನವದೆಹಲಿ: ಉಗ್ರ ಬುರ್ಹಾನ್ ಮುಜಾಫರ್ ವನಿ ಹತ್ಯೆ ನಂತರ ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವಂತೆ ಪ್ರಚೋದನೆ ನೀಡಿದ್ದು ತಮ್ಮ ಸಂಘಟನೆಯೇ ಎಂದು ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಹೇಳಿದ್ದಾನೆ.
ಕೊಕೇರ್ ನಾಗ್ ಪದೇಶದಲ್ಲಿ ಉಗ್ರರು ಅಡಿಗಿದ್ದ ಪ್ರದೇಶದ ಮೇಲೆ ದಾಳಿ ನಡೆಸಿದ ಸೇನೆಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಭಯೋತ್ಪಾದಕ ಬುರ್ಹಾನ್ ವನಿ ಅಡಗಿರುವ ಬಗ್ಗೆ ಮಾಹಿತಿ ಇರಲಿಲ್ಲ. ಆದ್ದರಿಂದ ಆತನನ್ನು ಎನ್ ಕೌಂಟರ್ ಮಾಡುವ ಮುನ್ನ ಸೇನೆಗೆ ಸೂಕ್ತವಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಸ್ಪಷ್ಟನೆ ನೀಡಿದ್ದರು.
ಜಮ್ಮು-ಕಾಶ್ಮೀರದ ಸರ್ಕಾರದ ಹೇಳಿಕೆ ಬೆನ್ನಲ್ಲೇ, ಲಷ್ಕರ್-ಎ- ತಯ್ಬಾ ಉಗ್ರ ಸಂಘಟನೆ ಮುಖಂಡ ಹಫೀಜ್ ಸಯೀದ್, ಉಗ್ರ ಮುಜಾಫರ್ ವನಿ ಎನ್ ಕೌಂಟರ್ ನಂತರ ಜಮ್ಮು-ಕಾಶ್ಮೀರದಲ್ಲಿ ಪ್ರತಿಭಟನೆ, ಗಲಭೆಯನ್ನು ಸೃಷ್ಟಿಸಿದ್ದು ತನ್ನ ಸಂಘಟನೆಯೇ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ. ಸೇನೆಗೆ ಉಗ್ರ ಮುಜಾಫರ್ ವನಿ ಅಡಗಿರುವುದು ಗೊತ್ತಿರಲಿಲ್ಲ ಎಂಬಂತೆಯೇ ಎನ್ ಕೌಂಟರ್ ಬಳಿಕ ಕಾಶ್ಮೀರದಲ್ಲಿ ಗಲಭೆ ಉಂಟುಮಾಡಿದ್ದು ಹಫೀಜ್ ಸಯೀದ್ ನ ಸಂಘಟನೆಯೇ ಎಂಬುದು ಮೆಹಬೂಬಾ ಸರ್ಕಾಕ್ಕೆ ತಿಳಿದಿರಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಫೈಸಲಾಬಾದ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಹಫೀಜ್ ಸಯೀದ್, ಕಾಶ್ಮೀರದಲ್ಲಿ ಲಕ್ಷಾಂತರ ಜನರು ಬೀದಿಗಿಳಿದಿದ್ದನ್ನು ನೋಡಿದ್ದೀರಾ? ಬೀದಿಗಿಳಿದು ನಡೆಸಿದ ಮುಜಾಫರ್ ವನಿಯ ಶವಯಾತ್ರೆಯ ನೇತೃತ್ವ ವಹಿಸಿದ್ದು ಯಾರು ಗೊತ್ತಾ? ಆ ವ್ಯಕ್ತಿ ಲಷ್ಕರ್-ಎ- ತಯ್ಬಾ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿ ಎಂದು ಹಫೀಜ್ ಸಯೀದ್ ಹೇಳಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


