ದೇಶ

ಕಾಶ್ಮೀರದ ಮುಗ್ಧ ಜನರನ್ನು ಕೊಲ್ಲಲು ಬಂದೆ: ಬಂಧಿತ ಪಾಕ್ ಉಗ್ರನಿಂದ ಆಘಾತಕಾರಿ ಮಾಹಿತಿ

ಕಾಶ್ಮೀರದ ಮುಗ್ಧ ನಾಗರಿಕರನ್ನು ಕೊಲ್ಲಲು ಭಾರತಕ್ಕೆ ಬಂದಿದ್ದಾಗಿ ಪಾಕಿಸ್ತಾನಿ ಉಗ್ರ ಬಹದ್ದೂರ್ ಅಲಿ ಅಲಿಯಾಸ್ ಸೈಫುಲ್ಲಾ ಮಾಹಿತಿ ಬಹಿರಂಗ ಪಡಿಸಿದ್ದಾನೆ. ..

ಕಾಶ್ಮೀರದ ಮುಗ್ಧ ಜನರನ್ನು ಕೊಲ್ಲಲು ಬಂದೆ: ಬಂಧಿತ ಪಾಕ್ ಉಗ್ರನಿಂದ ಆಘಾತಕಾರಿ ಮಾಹಿತಿ
ಬಹದ್ದೂರ್ ಅಲಿ
Published On :

ಶ್ರೀನಗರ: ಕಾಶ್ಮೀರದ ಮುಗ್ಧ ನಾಗರಿಕರನ್ನು ಕೊಲ್ಲಲು ಭಾರತಕ್ಕೆ ಬಂದಿದ್ದಾಗಿ ಪಾಕಿಸ್ತಾನಿ ಉಗ್ರ ಬಹದ್ದೂರ್ ಅಲಿ ಅಲಿಯಾಸ್ ಸೈಫುಲ್ಲಾ ಮಾಹಿತಿ ಬಹಿರಂಗ ಪಡಿಸಿದ್ದಾನೆ.

ಕಾಶ್ಮೀರದ ಕುಪ್ವಾರದಲ್ಲಿ ಗಡಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಉಗ್ರ ಬಹದ್ದೂರ್ ಅಲಿಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿತ್ತು.

ಈತನನ್ನು ರಾಷ್ಟ್ರೀಯ ತನಿಖಾ ದಳ ತೀವ್ರ ವಿಚಾರಣೆ ನಡೆಸಿದಾಗ ಕಾಶ್ಮೀರದ ಜನರನ್ನು ಕೊಲ್ಲಲು ಬಂದಿದ್ದಾಗಿ ಬಾಯ್ಬಿಟ್ಟಿದ್ದಾನೆ.

22 ವರ್ಷದ ಅಲಿ ಲಷ್ಕರ್-ಇ -ತಯ್ಬಾ ಸಂಘಟನೆಯಿಂದ ಗೆರಿಲ್ಲಾ ಯುದ್ದ ತರಬೇತಿ ಪಡೆದುಕೊಂಡಿದ್ದಾನೆ. ಬಂಧಿತ ವ್ಯಕ್ತಿ ಪಾಕಿಸ್ತಾನ ಪ್ರಜೆ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟ ಪಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.