ಪೇಪರ್, ಟಿವಿ ಯಾವುದೂ ಇಲ್ಲ: 12 ದಿನ ಧ್ಯಾನದ ಮೊರೆ ಹೋಗಲಿದ್ದಾರೆ ದೆಹಲಿ ಸಿಎಂ
ಬಿಡುವಿಲ್ಲದ ರಾಜಕೀಯದಿಂದಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ...

Published On :
ನವದೆಹಲಿ: ಬಿಡುವಿಲ್ಲದ ರಾಜಕೀಯದಿಂದಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮುಂದಿನ ತಿಂಗಳು ಒಂದು ಬ್ರೇಕ್ ಪಡೆಯಲು ನಿರ್ಧರಿಸಿದ್ದು, ರಾಜಕೀಯ ಒತ್ತಡದ ಬದುಕಿನಿಂದ ಕೊಂಚ ದೂರವಾಗಿ ಕೆಲ ಕಾಲ ಧ್ಯಾನದ ಮೊರೆ ಹೋಗಲು ಮುಂದಾಗಿದ್ದಾರೆ.
ನಿತ್ಯ ಒಂದಲ್ಲ ಒಂದು ವಿಚಾರವಾಗಿ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುವ ಅರವಿಂದ ಕೇಜ್ರಿವಾಲ್ ಶನಿವಾರದಿಂದ ಹನ್ನೆರಡು ದಿನಗಳ ಕಾಲ ಯಾರ ಕೈಗೂ ಸಿಗದೆ, ಪೇಪರ್ ಹಾಗೂ ಟಿವಿಯೂ ಇಲ್ಲದ ವಿಪಾಸನಾ ಧ್ಯಾನ ಕೇಂದ್ರಕ್ಕೆ ಸೇರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ನಿಟ್ಟಿನಲ್ಲಿ ಅಲ್ಲಿಯವರೆಗೆ ರಾಜ್ಯವನ್ನು ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಮುನ್ನಡೆಸಲಿದ್ದಾರೆ.
ತಮ್ಮ ಬ್ಯೂಸಿ ಲೈಫ್ ನಿಂದ ಕೊಂಚ ನಿರಾಳರಾಗಲು ನಾಗ್ಪುರದ ಧ್ಯಾನ ಕೇಂದ್ರಕ್ಕೆ ನಾಳೆ ಪ್ರಯಾಣ ಬೆಳೆಸಲಿದ್ದು, ಈ ಸಂದರ್ಭದಲ್ಲಿ ಕೇಜ್ರಿವಾಲ್ ಯಾವುದೇ ಮಾಧ್ಯಮ ಹಾಗೂ ಪೋನ್ ಕರೆಗೆ ಸಿಗುವುದಿಲ್ಲ. ವಿಪಾಸನ ಧ್ಯಾನ ಮಾಡುವ ಮೂಲಕ ಮನಃ ಶಾಂತಿ ಪಡೆಯಲಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ.
ಈ ಹಿಂದೆ 2015ರ ಲೋಕಸಭಾ ಚುನಾವಣಾ ಪ್ರಚಾರದ ನಂತರ ಇದೇ ಧ್ಯಾನ ಕೇಂದ್ರಕ್ಕೆ ಮೊರೆ ಹೋಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


