ದೇಶ

2007ರಲ್ಲಿ ವಿಮಾನ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಮಾಜಿ ಪ್ರಧಾನಿ ಸಿಂಗ್

ಮನಮೋಹನ್ ಸಿಂಗ್ ಅವರು 2007ರ ನವೆಂಬರ್ 11ರಂದು ಮಾಸ್ಕೊಗೆ ಭೇಟಿ ನೀಡಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಒನ್ ವಿಮಾನ, ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿತ್ತು..

2007ರಲ್ಲಿ ವಿಮಾನ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಮಾಜಿ ಪ್ರಧಾನಿ ಸಿಂಗ್
ಮನಮೋಹನ್ ಸಿಂಗ್
Published On :

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2007ರ ನವೆಂಬರ್ 11ರಂದು ಮಾಸ್ಕೊಗೆ ಭೇಟಿ ನೀಡಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಒನ್ ವಿಮಾನ, ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿತ್ತು ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ.

ರಷ್ಯಾದ ಮಾಸ್ಕೊ ವಿಮಾನ ನಿಲ್ದಾಣದಲ್ಲಿ ಇನ್ನೇನು ವಿಮಾನ ಇಳಿಯಬೇಕು ಎನ್ನುವಷ್ಟರಲ್ಲಿ, ವಿಮಾನದ ಲ್ಯಾಂಡಿಂಗ್ ಕೇರ್ ಕೆಳಕ್ಕೆ ಬರಲಿಲ್ಲ. ವಿಮಾನದ ಚಕ್ರ ಕೆಳಕ್ಕೆ ಬಂದಿಲ್ಲ ಎಂದು ಮಾಸ್ಕೊ ಎಟಿಸಿ ಸಿಬ್ಬಂದಿ ಕಾಕ್ಪಿಟ್‍ನಲ್ಲಿ ಎಚ್ಚರಿಕೆ ದೀಪ ಆನ್ ಮಾಡಿದಾಗ 747 ಬೋಯಿಂಗ್ ಸಿಬ್ಬಂದಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದರು ತಿಳಿದು ಬಂದಿದೆ.

ವಿವಿಐಪಿ ವಿಮಾನದಲ್ಲಿ ಸುರಕ್ಷತಾ ವಿಧಾನವನ್ನು ಉಲ್ಲಂಘಿಸಲಾಗಿತ್ತೇ ಎಂಬ ಬಗ್ಗೆ ಹಲವು ಮಂದಿ ವಿಮಾನ ತಂತ್ರಜ್ಞರನ್ನು ಸಂಪರ್ಕಿಸಲಾಯಿತು. ಈ ದೋಷ ಸರಿಪಡಿಸುವ ಮುನ್ನ ತೀರಾ ಕೆಳಗೆ ಇದು ಹಾರುತ್ತಿತ್ತು. ಇದೇ ವೇಳೆ ಮಾಸ್ಕೊ ಎಟಿಸಿ, ಕಾಕ್ಪಿಟ್ ನಲ್ಲಿ ಎಚ್ಚರಿಕೆ ಸಂದೇಶವನ್ನು ನೀಡಿತ್ತು. ಇದರಿಂದ ಎಚ್ಚೆತ್ತುಕೊಂಡ ಸಿಬ್ಬಂದಿ ಅಪಾಯದಿಂದ ಪಾರು ಮಾಡಿದರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.