ಮದರ್ ಥೆರೇಸಾಗೆ ಸಂತ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಕೇಜ್ರಿವಾಲ್, ಮಮತಾ
ರೋಮ್ ನಲ್ಲಿ ನಡೆಯಲಿರುವ ಮದರ್ ಥೆರೇಸಾಗೆ ಸಂತ ಪದವಿ ನೀಡಲಿರುವ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾಗವಹಿಸಲಿದ್ದಾರೆ.

ಕೋಲ್ಕತಾ: ರೋಮ್ ನಲ್ಲಿ ನಡೆಯಲಿರುವ ಮದರ್ ಥೆರೇಸಾಗೆ ಸಂತ ಪದವಿ ನೀಡಲಿರುವ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾಗವಹಿಸಲಿದ್ದಾರೆ.
ಸೆ.4 ರಂದು ಮದರ್ ಥೆರೇಸಾ ಅವರಿಗೆ ಸಂತ ಪದವಿ ನೀಡಲಾಗುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಸ್ಟರ್ ಪ್ರೇಮಾ ಅವರು ನೀಡಿರುವ ಆಹ್ವಾನವನ್ನು ದೆಹಲಿ ಸಿಎಂ ಒಪ್ಪಿಕೊಂಡಿವುದಾಗಿ ಆಪ್ ನಾಯಕ ಅಶುತೋಷ್ ಟ್ವೀಟ್ ಮಾಡಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಮಮತಾ ಬ್ಯಾನರ್ಜಿ ಈ ಹಿಂದೆ ಟ್ವಿಟರ್ ಮಾಡಿದ್ದರು. ಮದರ್ ತೆರೆಸಾ ಅವರನ್ನು ಸಂತರೆಂದು ಪರಿಗಣಿಸಲಾಗುವುದು ಎಂದು ವ್ಯಾಟಿಕನ್ ನ ಆಯೋಗವೊಂದು 2016 ರ ಮಾರ್ಚ್ ನಲ್ಲಿ ಹೇಳಿತ್ತು.
ಮದರ್ ತೆರೆಸಾ ಅವರು ನಿಧನಹೊಂದಿ ಸುಮಾರು ಎರಡು ದಶಕಗಳ ನಂತರ ಹಿರಿಯ ಪಾದ್ರಿಗಳ ಸಮಿತಿ ಅವರಿಗೆ ಅತ್ಯುನ್ನತ ಗೌರವ ನೀಡಿದ್ದು, ಸೆ.4 ರನೆಂದು ಸಂತ ಪದವಿಯನ್ನು ನೀಡಲಾಗುತ್ತಿದೆ. ಸಿಸ್ಟರ್ ಪ್ರೇಮಾ ಹಾಗೂ ಆರ್ಚ್ ಬಿಷಪ್ ಡಿ ಸೌಜಾ ಅವರೊಂದಿಗೆ ಮಮತಾ ಬ್ಯಾನರ್ಜಿ ರೋಮ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


